ಅಕ್ರಮ ಸಾಗುವಳಿ ಮಾಡಿದವ ಅರೆಸ್ಟ್

kdr arre a
ಎಮ್ಮೆದೊಡ್ಡಿಯ ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿದ್ದ ರಮೇಶನಾಯ್ಕನನ್ನು ಅರಣ್ಯಾಧಿಕಾರಿಗಳು ಬಂಧಿಸಿದರು. ಅಮತಾ, ಟಿ.ಕೆ.ರಜಿತ್, ಜೆ.ಸತೀಶ್, ಶಶಿಧರ್ ಇತರರಿದ್ದರು.
Published on

ಕಡೂರು: ಎಮ್ಮೆದೊಡ್ಡಿ ಸರ್ವೇ ನಂ.70ರಲ್ಲಿನ ಸೆಕ್ಷನ್ 4ರ ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಭಿವದ್ಧಿ ನಿಗಮ, ಕಡೂರು ಘಟಕದಿಂದ ಬೆಳೆಸಿದ ನೆಡುತೋಪು ಪ್ರದೇಶದಲ್ಲಿ ಅಕ್ರಮವಾಗಿ ಒಂದು ಎಕರೆ ಪ್ರದೇಶದಲ್ಲಿ ಮುಳ್ಳುಕಂಟಿಗಳನ್ನು ತೆಗೆದು ಸಾಗುವಳಿ ನಡೆಸಿದ್ದ ಗಾಳಿಗುತ್ತಿಯ ರಮೇಶನಾಯ್ಕ ಎಂಬಾತನನ್ನು ಅರಣ್ಯಾಧಿಕಾರಿಗಳು ಬಂಧಿಸಿ, ಟ್ರ್ಯಾಕ್ಟರ್, ನೇಗಿಲು, ಪಿಕಪ್ ವಾಹನ ವಶಕ್ಕೆ ಪಡೆದಿದ್ದಾರೆ.

1942ರಲ್ಲಿ ಅರಣ್ಯ ಭೂಮಿ ಹುಲಿ ಸಂರಕ್ಷಿತ ಪ್ರದೇಶವಾಗಿ ಗುರುತಿಸಲ್ಪಟ್ಟಿದ್ದು, 1976ರಲ್ಲಿ ಅರಣ್ಯ ಅಭಿವದ್ಧಿ ನಿಗಮಕ್ಕೆ ಹಸ್ತಾಂತರಗೊಂಡಿತ್ತು. 1985ರಿಂದಲೂ ಇಲ್ಲಿ ನೀಲಗಿರಿ ನೆಡುತೋಪು ಬೆಳೆಸಿದ್ದು, 2010ರಲ್ಲಿ ಅಂತಿಮ ಕಟಾವು ಮಾಡಲಾಗಿತ್ತು. 2013ರಲ್ಲಿ ಅರಣ್ಯ ಅಭಿವದ್ಧಿ ನಿಗಮ ನೆಡುತೋಪನ್ನು ಪುನಃ ನಿರ್ಮಾಣ ಮಾಡಲು ಮುಂದಾದಾಗ ಸ್ಥಳೀಯ ಗ್ರಾಮಸ್ಥರು ಆಕ್ಷೇಪಣೆ ಜತೆಗೆ ಅಡಚಣೆ ಉಂಟು ಮಾಡಿದ್ದರಿಂದ ನೆಡುತೋಪು ನಿರ್ಮಾಣ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗೆ ರಮೇಶನಾಯ್ಕ ಎಂಬುವವರು ಈ ಪ್ರದೇಶದಲ್ಲಿ ಟ್ರ್ಯಾಕ್ಟರ್ ಸಹಾಯದಿಂದ ಅಕ್ರಮವಾಗಿ ಭೂಮಿ ಹಸನುಗೊಳಿಸಿ ಅರಣ್ಯ ಸಂಪತ್ತನ್ನು ನಾಶ ಮಾಡಿದ್ದಾರೆ. ಸ್ಥಳ ಮಹಜರಿಗೆ ಮುಂದಾದಾಗ ಸ್ಥಳೀಯರು ಸಹಕರಿಸದ ಕಾರಣ ಅರಣ್ಯ ಅಭಿವದ್ಧಿ ನಿಗಮದ ಸಿಬ್ಬಂದಿ ಮತ್ತು ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರೇ ಪಂಚಾಯಿತಿದಾರರಾಗಿ ಅಕ್ರಮವಾಗಿ ಹಸನು ಮಾಡಲಾದ ಭೂ ಪ್ರದೇಶವನ್ನು ಪುನಃ ವಶಕ್ಕೆ ಪಡೆದಿದ್ದಾರೆ.

ಬಂಧಿತ ರಮೇಶನಾಯ್ಕನನ್ನು ಕಡೂರು ಜೆಎಂಎ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಕಡೂರು ವಲಯ ಅರಣ್ಯಾಧಿಕಾರಿ ಎಂ.ಆರ್.ಹರೀಶ್ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಎಮ್ಮೆದೊಡ್ಡಿ ಶಾಖೆ ಉಪ ವಲಯ ಅರಣ್ಯಾಧಿಕಾರಿ ಬಿ.ಎಸ್.ಅಮತಾ, ಅರಣ್ಯ ಪಾಲಕ ಟಿ.ಕೆ.ರಜಿತ್, ಅರಣ್ಯ ಅಭಿವದ್ಧಿ ನಿಗಮದ ಜೆ.ಸತೀಶ್, ಶಶಿಧರ್, ಅರುಣ್‌ಕುಮಾರ್, ಆರ್. ಮಧು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net