ಅಕ್ರಮ ಮಾರಾಕಾಸ್ತ್ರ ಹೊಂದಿದ್ದ ವ್ಯಕ್ತಿಯ ಬಂಧನ

arrested
Published on

ಅಕ್ರಮ ಮಾರಾಕಾಸ್ತ್ರ ಹೊಂದಿದ್ದ ವ್ಯಕ್ತಿಯ ಬಂಧನ

ಬೆಳಗಾವಿ: ಅಕ್ರಮವಾಗಿ ತಳವಾರ ಇಟ್ಟುಕೊಂಡಿದ್ದ ವ್ಯಕ್ತಿಯೊರ್ವನನ್ನು ನಗರದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಇಲ್ಲಿನ ಆಜಾದ್ ನಗರದ ನಿವಾಸಿ ಜುಬೇರ ಅಬ್ದುಲವಹಾಬ ಶೇಖ(೩೬) ಬಂಧಿತ ಆರೋಪಿ.ಈತ ಸುಭಾಷ ನಗರದ ಮರಾಠ ಕಾಲೇಜು ಬಳಿ ಚೀಲದಲ್ಲಿ ತಲವಾರ ಇಟ್ಟುಕೊಂಡು ಹೋಗುತ್ತಿದ್ದಾಗ, ಪೊಲೀಸ್‌ರು ಬಂಧಿಸಿದ್ದಾರೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net