ಅಕ್ರಮ ಮಳಿಗೆ ತೆರವುಗೊಳಿಸಿ

TKE (DSS)
ತರೀಕೆರೆ ಪುರಸಭೆ ಕಂದಾಯ ನಿರೀಕ್ಷಕ ಮಂಜುನಾಥ್‌ಗೆ ಡಿಎಸ್‌ಎಸ್ ಪ್ರಮುಖರು ಮನವಿ ಸಲ್ಲಿಸಿದರು. ಎಚ್.ಎಸ್.ರಾಜಪ್ಪ, ವಿಜಯ್, ಶಿವು, ಸಿದ್ದೀಕ್, ಪರಮೇಶ್ ಇತರರಿದ್ದರು.
Published on

ತರೀಕೆರೆ: ಆಡಳಿತ ಸೌಧದ ಎದುರುಗಡೆ ಅಕ್ರಮವಾಗಿ ಮಳಿಗೆ ನಿರ್ಮಿಸುತ್ತಿರುವ ಜತೆ ಮಹಾತ್ಮ ಗಾಂಧಿ ಉದ್ಯಾನ ಸಮೀಪ ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ ಸ್ಮರಣಾರ್ಥ ನಿರ್ಮಾಣ ಮಾಡಿರುವ ಬಸ್‌ಸ್ಟಾೃಂಡ್ ದುರ್ಬಳಕೆಯಾಗುತ್ತಿರುವುದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಪ್ರಮುಖರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟಿಸಿದರು.

ಪುರಸಭೆ ಕಚೇರಿ ಎದುರು ಕೆಲಕಾಲ ಪ್ರತಿಭಟಿಸಿ ಕಂದಾಯ ನಿರೀಕ್ಷಕ ಮಂಜುನಾಥ್ ಮೂಲಕ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ತಾಲೂಕು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಪ್ರಧಾನ ಸಂಚಾಲಕ ಎಚ್.ಎಸ್.ರಾಜಪ್ಪ ಮಾತನಾಡಿ, ಆಡಳಿತ ಸೌಧದ ಎದುರಿರುವ ಜಾಗದಲ್ಲಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಮಳಿಗೆ ನಿರ್ಮಾಣ ಮಾಡುತ್ತಿದ್ದಾರೆ. ಮಹಾತ್ಮ ಗಾಂಧಿ ಉದ್ಯಾನದ ಪಕ್ಕದಲ್ಲಿ ಪುರಸಭೆಯೇ ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ ಸ್ಮರಣಾರ್ಥ ನಿರ್ಮಿಸಿರುವ ಬಸ್ಟ್ತ್ರ್ಯಾಂಡ್‌ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲಿ ಗುತ್ತಿಗೆದಾರರೊಬ್ಬರು ಕಾಮಗಾರಿಗೆ ಬಳಸುವ ವಿವಿಧ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟು ಸ್ವಂತ ಸ್ವತ್ತು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಯಾರ ಅನುಮತಿಯನ್ನೂ ಪಡೆಯದೆ ಬಸ್ಟ್ತ್ರ್ಯಾಂಡ್‌ನಲ್ಲಿ ಸಂಗ್ರಹಿಸಿಟ್ಟಿರುವ ಸಾಮಗ್ರಿಗಳನ್ನು ತ್ವರಿತವಾಗಿ ತೆರವುಗೊಳಿಸಬೇಕಲ್ಲದೆ, ಆಡಳಿತ ಸೌಧದ ಎದುರು ಅನಧಿಕತವಾಗಿ ನಿರ್ಮಾಣ ಮಾಡುತ್ತಿರುವ ಮಳಿಗೆ ಮಾಲೀಕನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಲೂಕು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಸಂಘಟನಾ ಸಂಚಾಲಕರಾದ ವಿಜಯ್, ಸಿದ್ದೀಕ್, ಶಿವು, ತಾಲೂಕು ಬಂಜಾರ ಸಮಾಜದ ಪ್ರಮುಖರಾದ ವಿಜಯಕುಮಾರ್, ಪರಮೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net