ಅಕ್ರಮ ಮರಳು ಸಾಗಾಟಕ ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ

22ydg05
Published on


ಯಾದಗಿರಿ: ಅಕ್ರಮ ಮರಳು ಸಾಗಾಟವನ್ನು ಪ್ರಶ್ನೆ ಮಾಡಿದ್ದಕ್ಕೆ ಇಬ್ಬರು ಯುವಕರನ್ನು ದಂಧೆಕೋರರು ಅಪಹರಣ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಬಳಿ ಶನಿವಾರ ತಡರಾತ್ರಿ ನಡೆದಿದೆ.


ರಾಜು ಹಾಗೂ ಶರಣಗೌಡ ಹಯ್ಯಾಳ ಹಲ್ಲೆಗೊಳಗಾದ ಯುವಕರು. ಜಿಲ್ಲೆಯ ಕೃಷ್ಣಾ ನದಿಪಾತ್ರದಲ್ಲಿ ನಿರಂತರವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಗ್ರಾಪಂ ಸದಸ್ಯ ವಿಜಯ ರಾಠೋಡ್, ಬಸುರೆಡ್ಡಿ ಹಾಗೂ ಮಲ್ಲಿಕಾಜರ್ುನ ಎಂಬುವವರು ಸೇರಿ ಇಬ್ಬರನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ವಿಭೂತಿಹಳ್ಳಿ ಬಳಿ ಮನಬಂದಂತೆ ಥಳಿಸಿದ್ದಾರೆ. ಕಬ್ಬಿಣದ ರಾಡುಗಳಿಂದ ಮುಖ, ಕೈಕಾಲುಗಳಿಗೆ ಬಲವಾಗಿ ಹೊಡೆದಿದ್ದಾರೆ.

ಅಲ್ಲದೆ, ಇವರನ್ನು ಜೀವಂತವಾಗಿ ಕೃಷ್ಣಾ ನದಿಗೆ ಎಸೆಯಲು ದಂಧೆಕೋರರು ಪಾ್ಲೃನ್ ಮಾಡಿದ್ದರು ಎಂದು ತಿಳಿದು ಬಂದಿದೆ.
ಹಲ್ಲೆಗೊಳಗಾದ ಯುವಕರು ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಹಾಪುರ ಠಾಣೆಯಲ್ಲಿ ವಿಜಯ ರಾಠೋಡ್, ಬಸುರೆಡ್ಡಿ, ಮಲ್ಲಿಕಾಜರ್ುನ ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net