

ಸೇಡಂ: ತಾಲೂಕಿನ ಮಳಖೇಡ ಸಮೀಪದ ಕಾಗಿಣಾ ನದಿ ದಂಡೆಯಲ್ಲಿ ಅಕ್ರಮವಾಗಿ ಮರಳು ಸಾಗಣೆ ನಡೆಸುತಿದ್ದ ಟ್ರ್ಯಾಕ್ಟರ್ ವಶಕ್ಕೆ ಪಡೆಯಲಾಗಿದೆ.
ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಮಳಖೇಡ ಪೊಲೀಸ್ ಠಾಣೆಯ ಪ್ರಭಾರಿ ಪಿಎಸ್ಐ ಶಿವಶರಣಪ್ಪನವರ ನೇತೃತ್ವದ ತಂಡ ದಾಳಿ ನಡೆಸಿ ಟ್ರಾಕ್ಟರ್ ವಶಕ್ಕೆ ತೆಗೆದುಕೊಂಡು, ಟ್ರಾಕ್ಟರ್ ಮಾಲೀಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಚಾಲಕ ಪರಾರಿಯಾಗಿದ್ದಾನೆ.
ಎಎಸ್ಐ ಸುಬಾಶ್ಚಂದ್ರ ರಾಠೋಡ, ಪೇದೆ ನರಸರೆಡ್ಡಿ ಇದ್ದರು.