ಅಕ್ರಮ ಮದ್ಯ ಸಾಗಿಸುತ್ತಿದ್ದವನ ಬಂಧನ

17-4
ಆರೋಪಿ ಸಮೇತ ಅಕ್ರಮ ಮದ್ಯದ ಬಾಟಲಿ ವಶಕ್ಕೆ ಪಡೆದಿರುವ ಅಬಕಾರಿ ಪೊಲೀಸರು. ಮಂಜುನಾಥ ಗಲಗಲಿ, ಪುಷ್ಪಾ ಗಡಾದಿ, ವಿಠ್ಠಲ ಕ್ವಾರಿ, ರಾಯಪ್ಪ ಮಣ್ಣಿಕೇರಿ, ಗುಂಡುರಾವ್ ಪೂಜಾರಿ, ಬಿ.ಎಸ್.ಅಟಿಗಲ್, ಪ್ರವೀಣ ಬೆಳಕೂಡ, ಎಸ್.ಎಸ್.ಪಾಟೀಲ ಹಾಗೂ ಸಯ್ಯದ್ ಜಲಾನಿ ಇತರರು ಇದ್ದರು.
Published on

ಬೆಳಗಾವಿ: ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದವನನ್ನು ಶುಕ್ರವಾರ ಬಂಧಿಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು ವಾಹನ ಹಾಗೂ 600 ಬಾಟಲಿ ಮದ್ಯ ಜಪ್ತಿಮಾಡಿಕೊಂಡಿದ್ದಾರೆ. ಬೆಂಗಳೂರಿನ ನಿವಾಸಿ ಟಿ.ಜಯರಾಮ ಬಂಧಿತ ಆರೋಪಿ. ಬಂಧಿತನಿಂದ ಒಟ್ಟು 66 ಸಾವಿರ ರೂ.ಮೌಲ್ಯದ 600 ಬಾಟಲಿ ಮದ್ಯ ಹಾಗೂ 7.50 ಲಕ್ಷ ರೂ.ಮೌಲ್ಯದ ವಾಹನ ಜಪ್ತಿ ಮಾಡಲಾಗಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ವಾಹನ ಮಾಲೀಕನ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಬಕಾರಿ ನಿರೀಕ್ಷಕ ಮಂಜುನಾಥ ಗಲಗಲಿ, ಪುಷ್ಪಾ ಗಡಾದಿ, ವಿಠ್ಠಲ ಕ್ವಾರಿ, ರಾಯಪ್ಪ ಮಣ್ಣಿಕೇರಿ, ಗುಂಡುರಾವ್ ಪೂಜಾರಿ, ಬಿ.ಎಸ್.ಅಟಿಗಲ್, ಪ್ರವೀಣ ಬೆಳಕೂಡ, ಎಸ್.ಎಸ್.ಪಾಟೀಲ ಹಾಗೂ ಸಯ್ಯದ್ ಜಲಾನಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net