ಅಕ್ರಮ ಮದ್ಯ ಸಾಗಾಟ:ಓರ್ವ ವಶಕ್ಕೆ

FB_IMG_1744853529625
Published on

ಅಕ್ರಮ ಮದ್ಯ ಸಾಗಾಟ:ಓರ್ವ ವಶಕ್ಕೆ

ಚಿಕ್ಕೋಡಿ: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಒಟ್ಟು 8.500 ಲೀಟರ್ ಮದ್ಯವನ್ನು ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಟೋಲ್ ನಾಕಾ ಹತ್ತಿರ ಪೊಲೀಸರು ವಶ ಪಡೆಸಿಕೊಂಡಿರುವ ಘಟನೆ ಬುಧವಾರ ನಡೆದಿದೆ.

ಹುಬ್ಬಳಿ ಮೂಲದ ವ್ಯಕ್ತಿ ಅಮೃತ ಪವಾರ ಎಂಬುವವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈತ ಮಹಾರಾಷ್ಟ್ರ ರಾಜ್ಯದಿಂದ ಅಕ್ರಮವಾಗಿ ತನ್ನ ಕಾರ್ ನಲ್ಲಿ ಒಟ್ಟು 8.500 ಲೀಟರ್ ಮದ್ಯವನ್ನು ಸಾಗಿಸುತ್ತಿದ್ದ ವೇಳೆ ಸೆರೆ ಹಿಡಿಯಲಾಗಿದೆ. ಆರೋಪಿಯ ಮೇಲೆ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net