ಅಕ್ರಮ ಮದ್ಯ ಸಾಗಾಟ ಪತ್ತೆ

crime
Published on

ಅಕ್ರಮ ಮದ್ಯ ಸಾಗಾಟ ಪತ್ತೆ

ಬೆಳಗಾವಿ: ಗಣೇಶ ವಿಸರ್ಜನೆ ಹಿನ್ನೆಲೆ ಮದ್ಯಮಾರಾಟ ನಿಷೇಧವಿದ್ದ ದಿನವೇ ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದನ್ನು ತಾಲೂಕಿನ‌ ರಕ್ಕಸಕೊಪ್ಪ‌ ಜಲಾಶಯದ ಬಳಿಯ ರಸ್ತೆಯಲ್ಲಿ ಅಬಕಾರಿ ಸಿಬ್ಬಂದಿ ಪತ್ತೆ ಮಾಡಿದ್ದಾರೆ.

ಅಕ್ರಮ ಮದ್ಯ, ಬೈಕ್, ಕಾರು ಸೇರಿ ಒಟ್ಟು 5.63 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಗೋವಾದ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಮಾಹಿತಿ ಬಂದ ಹಿನ್ನೆಲೆ ಅಬಕಾರಿ ಪೊಲೀಸರು ರಕ್ಕಸಕೊಪ್ಪ ಬಳಿಯ ರಸ್ತೆಯಲ್ಲಿ ಕಾದು ಕುಳಿತಿದ್ದರು. ಮೊದಲು ಬೈಕ್ ನಲ್ಲಿ ಮುಂದೆ ಬಂದ ಇಬ್ಬರು, ಅಬಕಾರಿ ಸಿಬ್ಬಂದಿ ನೋಡಿ, ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಹಿಂದಿನಿಂದ ಕಾರೊಂದು ಬಂದಿದ್ದು, ಕಾರಿನಲ್ಲಿದ್ದ ವ್ಯಕ್ತಿಯೂ ಕಾರು ಬಿಟ್ಟು ಪರಾರಿಯಾಗಿದ್ದಾರೆ. ತಪಾಸಣೆ ವೇಳೆ ಮದ್ಯದ ಬಾಟಲಿಗಳು ಪತ್ತೆಯಾಗಿವೆ.

ವಿವಿಧ ಬ್ರಾಂಡ್‌ಗಳ 5.63 ಲಕ್ಷ ರೂ. ಮೌಲ್ಯದ 50 ಬಾಕ್ಸ್ ಮದ್ಯ, 3 ಲಕ್ಷ ಮೌಲ್ಯದ ಕಾರು, 30 ಸಾವಿರ ರೂ. ಮೌಲ್ಯದ ಬೈಕ್ ವಶಕ್ಕೆ ಪಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net