ಅಕ್ರಮ ಮದ್ಯ ವಶ, ಒಬ್ಬನ ಬಂಧನ

6MDG1
Published on

ಮುಂಡರಗಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ದುರ್ಗಾ ಢಾಬಾದ ಮೇಲೆ ಅಬಕಾರಿ ಅಧಿಕಾರಿಗಳು ಶನಿವಾರ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ ಅಪಾರ ಪ್ರಮಾಣದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಕೊರ್ಲಹಳ್ಳಿ ಗ್ರಾಮದ ದುರ್ಗಾ ಢಾಬಾದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಅಂದಾಜು 13,990 ರೂ. ಮೌಲ್ಯದ 31.41 ಲೀಟರ್ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಮಹಾಂತೇಶ ಖೇಮಪ್ಪ ಲಮಾಣಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಈ ಕುರಿತು ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಬಕಾರಿ ನಿರೀಕ್ಷಕ ದೀಪಕ ಎಸ್., ಉಪ ನಿರೀಕ್ಷಕ ವಿವೇಕಾನಂದ ಮಂಕಾಳೆ, ಸಿಬ್ಬಂದಿ ಹನುಮಂತ ನರೇಗಲ್ಲ, ತಿಮ್ಮಯ್ಯ ಪವಾರ, ಹನುಮಂತ ಹಳ್ಳಿ, ರುದ್ರೇಶ ಕೋಣಸಾಗರ, ಸದಾನಂದ ಹಡಪದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net