

ಮುಂಡರಗಿ: ಲಾಕ್ಡೌನ್ ಜಾರಿಯಲ್ಲಿದ್ದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿಯ ಶ್ರೀ ಆಂಜನೇಯ ವೈನ್ ಸೆಂಟರ್ ಅನ್ನು ಅಬಕಾರಿ ಅಧಿಕಾರಿಗಳು ಶನಿವಾರ ಸೀಜ್ ಮಾಡಿದ್ದಾರೆ. ಇನ್ನುಳಿದ ಮದ್ಯ ವಶಕ್ಕೆ ಪಡೆದು ಒಬ್ಬಾತನನ್ನು ಬಂಧಿಸಿದ್ದಾರೆ.
ವೈನ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಶಿವಾನಂದ ದಿಡಗೂರು ಎಂಬಾತ ಅಬಕಾರಿ ಇಲಾಖೆಯಿಂದ ವೈನ್ ಸೆಂಟರ್ಗೆ ಹಾಕಿದ್ದ ಸೀಲ್ ತೆಗೆದು ಅಕ್ರಮವಾಗಿ ಮದ್ಯ ಮಾರಾಟ ಮಾಡಿದ್ದಾನೆ. ಇದನ್ನು ಗಮನಿಸಿದ ಅಧಿಕಾರಿಗಳು ಬಾರ್ನಲ್ಲಿ ಸೀಲ್ ಹಾಕುವುದಕ್ಕೆ ಮುಂಚೆ ಇದ್ದ ಮದ್ಯದ ಸ್ಟಾಕ್ ಹಾಗೂ ಸೀಲ್ ಓಪನ್ ಮಾಡಿದ ಮೇಲೆ ಇದ್ದ ಸ್ಟಾಕ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ವ್ಯತ್ಯಾಸ ಕಂಡು ಬಂದಿದೆ.
ತಕ್ಷಣ ಅಬಕಾರಿ ಅಧಿಕಾರಿಗಳು ವೈನ್ ಸೆಂಟರ್ನಲ್ಲಿ ಇದ್ದ ಅಂದಾಜು 4.5 ಲಕ್ಷ ರೂ.ವೆಚ್ಚದ 1632.755 ಲೀಟರ್ ಮದ್ಯ ಜಪ್ತಿ ಮಾಡಿ ಶಿವಾನಂದನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅಬಕಾರಿ ನಿರೀಕ್ಷಕ ದೀಪಕ ಎಸ್. ಅವರು, ಲಾಕ್ ಡೌನ್ ಹಿನ್ನೆಲೆಯಲ್ಲಿ ಸೀಲ್ ಹಾಕಲಾಗಿದ್ದ ಬಾರ್ನಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ಪರಿಣಾಮ ಬಾರ್ ಅನ್ನು ಸೀಜ್ ಮಾಡಿ ಮದ್ಯವನ್ನು ವಶಕ್ಕೆ ಪಡೆದಿದ್ದೇವೆ. ಒಬ್ಬನನ್ನು ಬಂಧಿಸಲಾಗಿದ್ದು, ವೈನ್ ಸೆಂಟರ್ ಸನ್ನದುದಾರನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯುದ್ಧೋಪಾದಿಯಲ್ಲಿ ಸಂರಕ್ಷಣೆ ಕಾರ್ಯ
ಶಿರಹಟ್ಟಿ: ಜಿಲ್ಲಾ ಜಯ ಕರ್ನಾಟಕ ಸಂಘಟನೆ ವತಿಯಿಂದ ಬೆಳ್ಳಟ್ಟಿ ಗ್ರಾಪಂ.ಕಾರ್ವಿುಕರಿಗೆ ಪಡಿತರ ಕಿಟ್ ನೀಡಲಾಯಿತು.
ಗ್ರಾಪಂ. ಸದಸ್ಯ ತಿಮ್ಮರಡ್ಡಿ ಮರಡ್ಡಿ ಮಾತನಾಡಿ, ಕರೊನಾಮಹಾಮಾರಿ ಸೋಂಕು ತಡೆಗಟ್ಟಲು ಸರ್ಕಾರ ಯುದ್ದೋಪಾದಿಯಲ್ಲಿ ಕಾರ್ಯ ಕೈಗೊಂಡಿದೆ. ಗ್ರಾಪಂ.ನಿಂದ ಹಿಡಿದು ಪಟ್ಟಣ, ನಗರ ಪ್ರದೇಶದ ಪೌರ ಕಾರ್ವಿುಕರು, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜನಹಿತಕ್ಕಾಗಿ ಸೇವೆ ಸಲ್ಲಿಸುತ್ತಿದೆ ಎಂದರು.
ಹಾಲಪ್ಪ ವರವಿ, ಗ್ರಾಪಂ. ಉಪಾಧ್ಯಕ್ಷ ರಮೇಶ ನಿರ್ವಾಣಶೆಟ್ಟರ್, ಸದಸ್ಯ ಮೋಹನ ಗುತ್ತೆಮ್ಮನವರ, ಗಿರೀಶರಡ್ಡಿ ಮೇಕಳಿ, ಕೊಟ್ರೇಶ ಸಜ್ಜನರ, ನಾಗರಾಜ ಅಕ್ಕೂರ, ಬಸು ಹಳ್ಳೆಮ್ಮನವರ, ಸುರೇಶ, ತಿಪ್ಪಣ್ಣ ಅಂಗಡಿ, ಪುಟಾಣಿ ಚಂದ್ರು ವರವಿ ಇತರರು ಇದ್ದರು.
ಸರ್ಕಾರದ ನಿಯಮ ಪಾಲಿಸಿ
ಡಂಬಳ: ಸಾಮಾಜಿಕ ಕಾರ್ಯಕರ್ತ ಸಿ.ಕೆ. ಗಣಪ್ಪನವರ, ಮಹೇಶ ಗಡಿಗಿ, ಲಕ್ಷಣ ದೊಡ್ಡಮನಿಯವರು ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ ಬಡಾವಣೆಯ 120 ಬಡ ಕುಟುಂಬಗಳಿಗೆ ಶನಿವಾರ ಆಹಾರ ದಿನಸಿ ಸಾಮಗ್ರಿ ವಿತರಿಸಿದರು.
ಮುಂಡರಗಿ ಪುರಸಭೆ ಸದಸ್ಯ ಪವನ ಮೇಟಿ ಮಾತನಾಡಿ, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಎಂ. ಗಂಗಾವತಿ, ವೇ.ಮೂ. ಮುತ್ತು ಹಿರೇಮಠ, ಮಹೇಶ ಗಡಗಿ, ಶರಣು ಸೂಲಗಿ, ಲಕ್ಷ್ಮಣ ದೊಡ್ಡಮನಿ, ಸಂತೋಷ ಮುರಡಿ, ಬಾಬುಸಾಬ್ ಸರ್ಕವಾಸ, ದುರಗಪ್ಪ ಮಾದರ, ಯಮನೂರಪ್ಪ ದೊಡ್ಡಮನಿ, ನಿಂಗಪ್ಪ ಗೋವಿನಕೊಪ್ಪ, ದೇವಿಂದ್ರಪ್ಪ ಗೌಡಣ್ಣವರ, ಲಕ್ಷ್ಮಣ ಬೆಟಗೇರಿ, ರಿಯಾಜ್ಅಹ್ಮದ್ ದೊಡ್ಡಮನಿ, ದೇವಪ್ಪ ದೊಡ್ಡಮನಿ, ಬಸಪ್ಪ ವಗ್ಗರಣಿ, ಶಿವಪ್ಪ ತಳಗೇರಿ, ನಾಗರಾಜ ಬೆಟಗೇರಿ, ಹನುಮಂತ ಕಣವಿ, ಸೋಮಪ್ಪ ತಳಗೇರಿ ಇತರರು ಇದ್ದರು.
115 ಜನರಿಂದ ರಕ್ತದಾನ
ಗದಗ: ಇಲ್ಲಿನ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಹಾಗೂ ಜಿಮ್್ಸ ಸಹಯೋಗದಲ್ಲಿ ಗುರುವಾರ ರಕ್ತದಾನದ ಶಿಬಿರ ಜರುಗಿತು.
ಶಾಸಕ ಎಚ್.ಕೆ. ಪಾಟೀಲ ಶಿಬಿರ ಉದ್ಘಾಟಿಸಿದರು. 115 ಜನ ರಕ್ತದಾನ ಮಾಡಿದರು.
ಲಾಕ್ ಡೌನ್ ವೇಳೆ ರಕ್ತದಾನ ಶಿಬಿರಗಳು ನಡೆಯದೇ ರಕ್ತದ ಕೊರತೆ ಹೆಚ್ಚಾಗಿದೆ. ರಕ್ತದ ಕೊರತೆ ನೀಗಿಸಲು ಶಾಸಕ ಎಚ್.ಕೆ. ಪಾಟೀಲ ಅವರು ನೀಡಿದ ನಿರ್ದೇಶನದ ಮೇರೆಗೆ ಶಿಬಿರ ಆಯೋಜಿಸಲಾಗಿತ್ತು ಎಂದು ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ಮಂದಾಲಿ ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿ.ಪಂ. ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ಉಮರ್ ಫಾರೂಕ್ ಹುಬ್ಬಳ್ಳಿ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಅಹ್ಮದ್ ಖಾಜಿ, ಸರಫರಾಜ್ ಬಬರ್ಚಿ, ಯೂಸುಫ್ ಡಂಬಳ, ಅನಿಲ ಸಿಂಗಟಾಲಕೇರಿ, ಅಂದಪ್ಪ ಬಿಂಗಿ, ರವೀಂದ್ರ ಕುಮಾರ ಹಡಪದ, ರೋಹಿತ ನಾಯ್ಕರ್, ಡಾ. ಮಹೇಶ ಪಾಟೀಲ ಹಾಗೂ ಜಿಮ್್ಸ ಸಿಬ್ಬಂದಿ ಇದ್ದರು.