ಅಕ್ರಮ ಪೆಟ್ರೋಲ್ ಮಾರಾಟ ಓರ್ವನ ಬಂದನ

ಅಕ್ರಮ ಪೆಟ್ರೋಲ್ ಮಾರಾಟ ಓರ್ವನ ಬಂದನ
Published on

ಹಾಸನ : ಪೆಟ್ರೋಲ್ ಟ್ಯಾಂಕರ್‌ನಿಂದ ಅಕ್ರಮವಾಗಿ ಪೆಟ್ರೋಲ್ ಕದ್ದು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನ ಶುಕ್ರವಾರ ರಾತ್ರಿ ಹಾಸನ ಬಡಾವಣೆ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಎಸ್‌ಐ ಪ್ರವೀಣ್ ಕುಮಾರ್ ಅವರು ರಾತ್ರಿ ಗಸ್ತ್ ಕರ್ತವ್ಯದಲ್ಲಿದ್ದ ಸಮಯದಲ್ಲಿ ಹಾಸನ - ಹೊಳೆನರಸೀಪುರ ರಸ್ತೆಯ ಅರುಣ ಬಾರ್ ಹತ್ತಿರ ಚೇತನ್ ಎಂಬಾತ ಕಾರು ನಿಲ್ಲಿಸಿಕೊಂಡು ಅನುಮಾನ್ಪಾದವಾಗಿ ತಿರುಗಾಡುತ್ತಿದ್ದ, ಆಗ ಪೊಲೀಸ್‌ರು ಪರಿಶೀಲಿಸಿದಾಗ ಆತನ ಕಾರಿನ ಹಿಂಬದಿಯ ಡಿಕ್ಕಿಯಲ್ಲಿ 20 ಲೀಟರ್‌ನ 5 ಪೆಟ್ರೋಲ್ ತುಂಬಿದ ಕ್ಯಾನಗಳು ಪತ್ತೆಯಾಗಿವೆ.

ಅರೋಪಿ ದುದ್ಧ ಹೋಬಳಿ ಬಿಟ್ಟಹಳ್ಳಿ ಗ್ರಾಮದ ಚೇತನ್ ಡಿ.ಎಸ್ (27) ಎಂಬಾತ ಕಾರಿನಲ್ಲಿ ಪೆಟ್ರೋಲ್ ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ತಿಳಿದು ಬಂದಿದೆ. ಕೆ.ಎ 13 ಬಿ 6246ರ ಪೆಟ್ರೋಲ್ ಟ್ಯಾಂಕರ್ ಚಾಲಕ ಸಂತೋಷನ ಜೊತೆ ಸೇರಿಕೊಂಡು ಪೆಟ್ರೋಲ್ ಕಳ್ಳತನ ಮಾಡಿ ಬೇರೆಯವರಿಗೆ ಮಾರಾಟ ಮಾಡಲು ಮುಂದಾಗಿದ್ದರು ಒಪ್ಪಿಕೊಂಡಿರುವ ಚೇತನನ್ನ ವಶಪಡಿಸಿಕೊಂಡಿರುವ ಪೊಲೀಸರು ಈ ಸಂಬಂಧ ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಮತ್ತೂಬ್ಬ ಆರೋಪಿ ಲಾರಿ ಚಾಲಕ ಸಂತೋಷನನ್ನು ಕೂಡ ಬಂದಿಸಲು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net