ಅಕ್ರಮ ಪಡಿತರ ಸಂಗ್ರಹಿಸಿದ್ದವನ ಬಂಧನ

Published on

ಕೊಳ್ಳೇಗಾಲ: ಪಟ್ಟಣದ ಬ್ರದರನ್ ಚರ್ಚ್ ವೃತ್ತದ ಬಳಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 311 ಕೆ.ಜಿ ಪಡಿತರ ಅಕ್ಕಿ ಸಮೇತ ಆರೋಪಿಯನ್ನು ಪಟ್ಟಣ ಠಾಣೆ ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದಾರೆ.


ಹನೂರು ಸಂತೇಪೇಟೆ ನಿವಾಸಿ ಕೀರ್ತೇಶ್ (28) ಬಂಧಿತ ಆರೋಪಿ. ಈತ ಹನೂರು ಸುತ್ತಮುತ್ತಲ ಪ್ರದೇಶದಲ್ಲಿ ಪಡಿತರ ಅಕ್ಕಿಯನ್ನು ಖರೀದಿಸಿ ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಪಟ್ಟಣದ ಬ್ರದರನ್ ಚರ್ಚ್ ವೃತ್ತದ ಬಳಿ ಸಂಗ್ರಹಿಸಿಟ್ಟಿದ್ದಾನೆ ಎಂಬ ಮಾಹಿತಿ ತಿಳಿದ ಆಹಾರ ಇಲಾಖೆ ನಿರೀಕ್ಷಕ ಪ್ರಸಾದ್ ಅವರು ಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.


ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳ ದಾಳಿ ನಡೆಸಿ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿದ್ದಾರೆ. ಹನೂರು ಕಡೆಯಿಂದ ಪಡಿತರವನ್ನು ಸಾಗಿಸಿ ತಂದಿದ್ದು, ಬೇರೆಡೆ ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ಆತತಿಳಿಸಿದ್ದಾನೆ. ಸಬ್ ಇನ್ಸ್‌ಪೆಕ್ಟರ್ ಮಹೇಶ್, ಹೆಡ್‌ಕಾನ್ಸ್‌ಟೇಬಲ್ ಸೂರ್ಯಪ್ರಕಾಶ್, ಕಾನ್ಸ್‌ಟೇಬಲ್ ಸುನೀಲ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net