ಅಕ್ರಮ ದಂಧೆ ಅಪರಾಧಕ್ಕೆ ಕಡಿವಾಣ

ydg1
Published on

ಯಾದಗಿರಿ: ಅಪರಾಧ ಪ್ರಕರಣಗಳ ಬೆನ್ನತ್ತಿರುವ ಜಿಲ್ಲಾ ಪೊಲೀಸ್ ಇಲಾಖೆ ಕಳೆದೊಂದು ತಿಂಗಳಲ್ಲಿ ವಿವಿಧ 95 ಪ್ರಕರಣ ಭೇದಿಸಿ 133 ಜನರ ವಿರುದ್ಧ ದೂರು ದಾಖಲಿಸಿದ್ದಲ್ಲದೆ ಸುಮಾರು 10 ಲಕ್ಷ ರೂ. ನಗದು ಜಪ್ತಿ ಮಾಡಿಕೊಳ್ಳುವ ಮೂಲಕ ಬಿಸಿ ಮುಟ್ಟಿಸಿದೆ.

ಜಿಲ್ಲೆಯಲ್ಲಿ ವ್ಯಾಪಕವಾಗಿ ಮಟ್ಕಾ, ಜೂಜಾಟ, ಅಕ್ರಮ ಮದ್ಯ, ಮರಳು ಮತ್ತು ಪಡಿತರ ಅಕ್ಕಿ ಮಾರಾಟ ಧಂದೆ ಬಗ್ಗೆ ಸಾರ್ವಜನಿಕರಿಂದ ಲಿಖಿತ ಮತ್ತು ಮೌಖಿಕ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ನೇತೃತ್ವದಲ್ಲಿ ಹೆಚ್ಚುವರಿ ಎಸ್‌ಪಿ ಧರಣೇಶ್, ಡಿವೈಎಸ್‌ಪಿ ಇತರ ಅಧಿಕಾರಿಗಳು ಸಭೆ ನಡೆಸಿ ಇವುಗಳಿಗೆ ಮಟ್ಟ ಹಾಕಲು ರಚಿಸಿದ್ದ ವಿಶೇಷ ತಂಡದ ಕಾರ್ಯಾಚರಣೆ ಫಲಪ್ರದವಾಗುತ್ತಿದೆ ಎಂಬುದಕ್ಕೆ ಅಂಕಿ-ಅAಶಗಳೇ ಸಾಕ್ಷಿಯಾಗಿವೆ.

ಶಹಾಪುರ, ಯಾದಗಿರಿ, ಸುರಪುರ, ಗುರುಮಠಕಲ್, ವಡಗೇರಾ, ಸೈದಾಪುರ, ಕೆಂಭಾವಿ, ಕೊಡೇಕಲ್, ಹುಣಸಗಿ, ಗೋಗಿ, ಶಹಾಪುರ, ಯಾದಗಿರಿ ಗ್ರಾಮೀಣ, ಭೀಮರಾಯನ ಗುಡಿ ಹಾಗೂ ನಾರಾಯಣಪುರ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಒಂದು ತಿಂಗಳಿAದ ನಿರಂತರ ದಾಳಿ ನಡೆಸಿ 38 ಮಟ್ಕಾ, 24 ಜೂಜಾಟ, 30 ಮದ್ಯ ಮಾರಾಟ, ತಲಾ ಎರಡು ಕಡೆ ಪರಿತರ ಅಕ್ಕಿ ಮತ್ತು ಅಕ್ರಮ ಮರಳು ಪ್ರಕರಣಗಳನ್ನು ಭೇದಿಸಿದ್ದಾರೆ.
ಮಟ್ಕಾ ಕೇಸ್‌ಗೆ ಸಂಬAಧಿಸಿದAತೆ 22,630 ರೂ. ಜಪ್ತಿ ಮಾಡಿ 38 ಜನರ ವಿರುದ್ಧ ದೂರು ದಾಖಲಿಸಿದ ಪೊಲೀಸರು, ಜೂಜಾಟಕ್ಕೆ ಸಂಬAಧಿಸಿದAತೆ 66,320 ರೂ. ಜಪ್ತಿ ಮಾಡಿ 66 ಜನರ ವಿರುದ್ಧ ಕೇಸ್ ಫೈಲ್ ಮಾಡಿದ್ದಾರೆ. ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಬAಧಿಸಿದAತೆ 17,725 ರೂ. ಜಪ್ತಿ ಮಾಡಿಕೊಂಡು 26 ಜನ, ಅಕ್ರಮ ಪಡಿತರ ಅಕ್ಕಿ ಮಾರಾಟಕ್ಕೆ ಸಂಬAಧಿಸಿದAತೆ ಎರಡು ಪ್ರಕರಣ ದಾಖಲಿಸಿ 8,39,800 ಲಕ್ಷ ಮೌಲ್ಯದ ಸುಮಾರು 500 ಚೀಲ ಅಕ್ಕಿ ವಶಪಡಿಸಿಕೊಂಡು ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net