ಅಕ್ರಮ ತನಿಖೆಗೆ ತಂಡ ರಚಿಸಿ

ydg03
Published on

ದೋರನಹಳ್ಳಿ: ಉದ್ಯೋಗ ಖಾತ್ರಿ ಮತ್ತು ವಸತಿ ಯೋಜನೆಯಡಿ ಬರುವ ಅನುಧಾನದ ದುರ್ಬಳಕೆ ಮಾಡಿ ಅಕ್ರಮ ಎಸಗಲಾಗಿದ್ದು, ಈ ಅಕ್ರಮ ತನಿಖೆಗೆ ಕೂಡಲೇ ತಂಡ ರಚಿಸಬೇಕು ಎಂದು ವಿವಿಧ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಗ್ರಾಪಂ ಎದುರು ಪ್ರತಿಭಟನೆ ಮಾಡಿ ಆಗ್ರಹಿಸಿದ್ದಾರೆ.

ಈ ಕುರಿತು ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಒಕ್ಕೂಟದ ಕರ‍್ಯಕರ್ತರು, ೨೦೨೦-೨೧ರಿಂದ ೨೦೨೪-೨೫ರ ವರೆಗೂ ಗ್ರಾಪಂನಲ್ಲಿ ಉದ್ಯೋಗ ಖಾತ್ರಿ ಮತ್ತು ವಿವಿಧ ವಸತಿ ಯೋಜನೆಯಡಿ ಅನುದಾನದ ದುರ್ಬಳಕೆ ಮತ್ತು ಅವ್ಯವಹಾರ ನಡೆದಿದೆ. ವಸತಿ ಯೋಜನೆಗಳ ಅಡಿ ನಿರಾಶ್ರಿತರಿಗೆ ನೀಡಬೇಕಿದ್ದ ಮನೆ ಕಾಟಾಚಾರಕ್ಕೆ ಸಭೆ ಮಾಡಿ ತಮ್ಮ ತಮ್ಮ ಕುಟುಂಬದವರಿಗೆ, ಸಂಬAಧಿಕರಿಗೆ ನೀಡಲಾಗಿದೆ. ಉದ್ಯೋಗ ಖಾತ್ರಿಯಲ್ಲಿ ರೈತರ ಜಮೀನುಗಳು ಸೇರಿ ಯಾವುದೇ ತರಹದ ಕಾಮಗಾರಿ ಮಾಡದೆ ಹಣ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.

೧೫ನೇ ಹಣಕಾಸು ಯೋಜನೆಯ ಹಣವನ್ನು ಗ್ರಾಮದಲ್ಲಿ ಯಾವುದೇ ಅಭೀವೃದ್ಧಿ ಕಾರ್ಯ ಮಾಡದೆ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಎಲ್ಲ ಅಕ್ರಮಗಳ ತನಿಖೆಗೆ ಕೂಡಲೇ ತಂಡ ರಚಿಸಿ ಸೂಕ್ತ ತನಿಖೆ ಮಾಡಬೇಕು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಮರಿಲಿಂಗಪ್ಪ ಕೌದಿ, ಸದ್ದಾಂ ಮಠ್, ಭೀಮು ಸಾವೂರ್, ಮಲ್ಲಪ್ಪ ಯಳವೂರ್, ಸಿದ್ದು ಬೇವಿನಹಳ್ಳಿ, ಶಂಕರ ಜಾಗಿರದಾರ, ದೇವು ಉಪ್ಪಾರ, ವಿಜಯಕುಮಾರ, ಭೀಮರಾಯ ರಸ್ತಾಪುರ ಇತರರಿದ್ದರು. ಈ ಕುರಿತು ಬರೆದ ಮನವಿಯನ್ನು ಸ್ಥಳಕ್ಕೆ ಆಗಮಿಸಿದ ಗ್ರೇಡ್-೨ತಹಸೀಲ್ದಾರ್‌ಗೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net