ಅಕ್ರಮ ಚಟುವಟಿಕೆಯಲ್ಲಿ  ತೊಡಗಿದ್ದ ಮೂವರು ಪೊಲೀಸ್ ವಶಕ್ಕೆ

crime
Published on
ಪ್ರತ್ಯೇಕ ಪ್ರಕರಣ |ಅಕ್ರಮ ಚಟುವಟಿಕೆಯಲ್ಲಿ  ತೊಡಗಿದ್ದ ಮೂವರು ಪೊಲೀಸ್ ವಶಕ್ಕೆ

ಬೆಳಗಾವಿ: ನಗರದಲ್ಲಿ ನಡೆದ ಮೂರು ಪ್ರತ್ಯೇಕ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ನಗರ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅನಗೋಳದ ಕುರುಬರ ಗಲ್ಲಿಯಲ್ಲಿ ಮಾದಕ ಗಾಂಜಾ ಸೇವಿಸಿ ಅಸಹಜವಾಗಿ ವರ್ತಿಸುತ್ತಿದ್ದ ಪ್ರಪ್ಪುಲ ಗಜಾನನ ಪಾಟೀಲ(೨೬),ಶಂಕರ ಭೀಮಪ್ಪಾ ಮಲತವಾಡಿ(೨೫) ಎಂಬುವವರನ್ನು  ಹಾಗೂ ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಕೆ ಕೊಪ್ಪ ಗ್ರಾಮದಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಶೇಖರ ಹನುಮಂತ ತಳವಾರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net