

ಕಲಬುರಗಿ: ನಗರದ ಆಳಂದ ರಿಂಗ್ ರಸ್ತೆಯ ತಗಡಿನ ರೂಮಿನಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಂಗ್ರಹಿಸುತ್ತಿರುವುದು ಪತ್ತೆ ಹಚ್ಚಿ, ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ಆಟೋಗಳಿಗೆ ಗ್ಯಾಸ್ ತುಂಬಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಆಹಾರ ನಿರೀP್ಷÀಕ ಯ¯್ಲÁಲಿಂಗ ಕಡಕೋಳಕರ, ಪೊಲೀಸ್ ಸಿಬ್ಬಂದಿ ಮಲ್ಲನಗೌಡ, ಚಂದ್ರಶೇಖರ ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಅಕ್ರಮ ಪತ್ತೆಯಾಗಿದೆ. ೧೫೦೦ ರೂ.ಮೌಲ್ಯದ ಮೂರು ಸಿಲಿಂಡರ್, ಮೂರು ಸಾವಿರ ರೂ. ಮೌಲ್ಯದ ತೂಕದ ಯಂತ್ರ, ೧ ಸಾವಿರ ರೂ.ಮೌಲ್ಯದ ಎಚ್.ಪಿ.ಮೋಟಾರ ಸೇರಿ ೫,೫೦೦ ರೂ.ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ. ಪರವಾನಗಿ ಇಲ್ಲದೆ ಆಟೋಗಳಿಗೆ ಗ್ಯಾಸ್ ತುಂಬುತಿದ್ದ ಬಾಬಾ ಪಟೇಲ್ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ ಅಡಿ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.