ಅಕ್ರಮ ಗೋ ಸಾಗಣೆ ತಡೆಯಿರಿ

CTD 26 VHP-02
Published on

ಚಿತ್ರದುರ್ಗ: ಅಕ್ರಮ ಗೋ ಸಾಗಣೆ ತಡೆಯಬೇಕು. ಈ ಮೂಲಕ ಗೋವುಗಳ ಹತ್ಯೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಜಿಲ್ಲಾ ಪೊಲೀಸ್ ಇಲಾಖೆಗೆ ಸೋಮವಾರ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020, ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ ಜಾರಿಯಲ್ಲಿದ್ದು ಅದರನ್ವಯ ಯಾವುದೇ ಗೋ (ದನ, ಎತ್ತು, ಹೋರಿ ಕರು) ಬಲಿಯನ್ನು ನಿಷೇಧಿಸಲಾಗಿದೆ. ಆದರೂ ಹತ್ಯೆ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಕ್ರಮ ಗೋಸಾಗಟ ಕುರಿತು ಎಚ್ಚರವಹಿಸಬೇಕು. ಮನೆಗಳಲ್ಲಿ ಸಾಕುವವರ, ಬೀದಿಗಳಲ್ಲಿ ಸಂಚರಿಸುವ ಗೋವುಗಳು ಕಳ್ಳತನ ಆಗದಂತೆ ಅಹೋರಾತ್ರಿ ಗಸ್ತು, ಅಗತ್ಯವಿದ್ದಲ್ಲಿ ನಾಕಾಬಂದಿ ಹಾಕಬೇಕು ಎಂದು ಒತ್ತಾಯಿಸಿದರು.
ವಿಎಚ್‌ಪಿ ಮತ್ತು ಬಜರಂಗದಳದ ಪದಾಧಿಕಾರಿಗಳಾದ ಪಿ.ರುದ್ರೇಶ್, ಓಂಕಾರ್, ಸಂದೀಪ್, ಕೇಶವ್, ಶ್ರೀನಿವಾಸ್, ಶಶಿಧರ್, ರಂಗಸ್ವಾಮಿ, ಕಿಶೋರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net