ಅಕ್ರಮ ಗೋ ಸಾಗಣೆ ತಡೆಗಟ್ಟಲಿ

1Huk1
Published on

ಹುಕ್ಕೇರಿ: ತಾಲೂಕಿನಾದ್ಯಂತ ಬಕ್ರೀದ್ ಹಬ್ಬದ ಹಿನ್ನೆಲೆ ಅಕ್ರಮ ಗೋ ಸಾಗಾಣೆಯಾಗುವ ಸಾಧ್ಯತೆ ಇದ್ದು, ಅದನ್ನು ತಡೆಗಟ್ಟಬೇಕು ಎಂದು ವಿಶ್ವ ಹಿಂದು ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಶಿವರಾಜ ನಾಯಿಕ ಹೇಳಿದರು.

ತಾಲೂಕು ಪೊಲೀಸ್ ಠಾಣೆಯಲ್ಲಿ ಶನಿವಾರ ಸಿಪಿಐ ಮಹಾಂತೇಶ ಬಸ್ಸಾಪೂರ ಅವರಿಗೆ ಮನವಿಸಲ್ಲಿಸಿ ಮಾತನಾಡಿದರು. ಮಾತೆ ಸ್ವರೂಪದಲ್ಲಿ ಕಾಣುವ ಗೋಮಾತೆಯನ್ನು ಪೂಜಿಸುತ್ತಾರೆ. ಕಾರಣ ಅವುಗಳ ಮಾಂಸ ಮಾರಾಟ ಮತ್ತು ಅಕ್ರಮವಾಗಿ ಸಾಗಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ದುರ್ಗಾವಾಹಿನಿ ಅಧ್ಯಕ್ಷೆ ಕಾವೇರಿ ಪೂಜೇರಿ, ಬಜರಂಗ ದಳ ತಾಲೂಕು ಸಹ ಸಂಯೋಜಕ ಆಕಾಶ ಖಾನಾಯಿ, ಲಕ್ಷ್ಮಣ ಯಡ್ರಾಂವಿ, ಜಯಾನಂದ ಸಾವಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net