ಅಕ್ರಮ ಗಾಂಜಾ ಮಾರಾಟ ಐವರ ಬಂಧನ

Published on

ಮಧುಗಿರಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಐವರು ಆರೋಪಿಗಳನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಮಧುಗಿರಿ ತಾಲೂಕು ಸಿದ್ದಾಪುರ ಗೊಲ್ಲರಹಟ್ಟಿ ಕ್ರಾಸ್​ ಬಳಿ ಗಾಂಜಾ ಮಾರುತ್ತಿದ್ದ ಮಧುಗಿರಿ ಪಟ್ಟಣದ ಖಾಜಿಮೊಹಲ್ಲಾದ ಮೊಹಮ್ಮದ್​ ಅರ್ಷು (24)ನನ್ನು ಬುಧವಾರ ಸಂಜೆ ಮಧುಗಿರಿ ಪೊಲೀಸರು ಬಂಧಿಸಿ ಆತನ ಬಳಿಯಿಂದ 4500 ರೂ., ಮೌಲ್ಯದ 215 ಗ್ರಾಂ ತೂಕದ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿರುತ್ತಾರೆ.

3 ಕೆಜಿ ಗಾಂಜಾ ಸೊಪು$್ಪ: ಹೆಬ್ಬೂರು ಠಾಣಾ ವ್ಯಾಪ್ತಿಯ ನಾಗವಲ್ಲಿಯಿಂದ ಸಿರಿವಾರ ಕಡೆಗೆ ಹೋಗುವ ರಸ್ತೆಯ ತಿರುವಿನಲ್ಲಿ ಅನುಮಾನಸ್ಪದವಾಗಿ ಬ್ಯಾಗ್​ ಹಿಡಿದು ನಿಂತಿದ್ದ ಬೆಂಗಳೂರಿನ ಕಾಚೋಹಳ್ಳಿಯ ಮಹಮದ್​ ಮುಬಾರಕ್​ (40)ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ ಅಕ್ರಮವಾಗಿ 3.5 ಲಕ್ಷ ರೂ., ಮೌಲ್ಯದ 3.5 ಕೆಜಿ ಗಾಂಜಾ ಸೊಪು$್ಪ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.

ಇನ್ನಿಬ್ಬರು ಆರೋಪಿಗಳು: ಬಡವನಹಳ್ಳಿಯಿಂದ ಅಹೋಬಲ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಗಾಂಜಾ ಸೊಪು$್ಪ ಮಾರಾಟ ಮಾಡಲು ಪ್ಲಾಸ್ಟಿಕ್​

ಕವರ್​ ಇಟ್ಟುಕೊಂಡಿದ್ದ ದೊಡ್ಡೇರಿಯ ತಿಪ್ಪೇಶ್​ (26), ಕೋಳಿ ವ್ಯಾಪಾರಿ ಜಲಾಲ್​ (21)ರನ್ನು ಬಂಧಿಸಲಾಗಿದೆ. 12 ಸಾವಿರ ಮೌಲ್ಯದ 300 ಗ್ರಾಂ ತೂಕದ

ಗಾಂಜಾ ಸೊಪ್ಪನ್ನು ಬಡವನಹಳ್ಳಿ ಠಾಣೆ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್​ ಅಧೀಕ್ಷಕ ಕೆ.ವಿ.ಅಶೋಕ್​ ಈ ಕಾರ್ಯಾಚರಣೆ ನಡೆಸಿದ

ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net