ಅಕ್ರಮ ಇ-ಸ್ವತ್ತು, ಯರಬಳ್ಳಿ ಪಿಡಿಒ ಸಸ್ಪೆಂಡ್

suspend
Published on

ಚಿತ್ರದುರ್ಗ: ಜಂಟಿ ಖಾತೆಯಲ್ಲಿದ್ದ ನಿವೇಶನಗಳನ್ನು ವ್ಯಕ್ತಿಯೊಬ್ಬರಿಗೆ ಅಕ್ರಮವಾಗಿ ಖಾತೆ, ಇ-ಸ್ವತ್ತು ಮಾಡಿಕೊಟ್ಟಿದ್ದಾರೆ ಎಂಬ ತನಿಖಾ ವರದಿ ಆಧರಿಸಿ ಹಿರಿಯೂರು ತಾಲೂಕು ಯರಬಳ್ಳಿ ಗ್ರಾಪಂ ಪಿಡಿಒ ಎಸ್.ಬಸವರಾಜು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಅವರು ಮಂಗಳವಾರ ಆದೇಶಿಸಿದ್ದಾರೆ.
ಯರಬಳ್ಳಿಯಲ್ಲಿ ತಿಪ್ಪಮ್ಮ ಎಂಬುವರ ಹೆಸರಲ್ಲಿದ್ದ ಸೈಟ್‌ನಂ.31 ಹಾಗೂ 32ನ್ನು ಮದ್ಯದಂಗಡಿಗಾಗಿ ಕಂದಿಕೆರೆಯ ಕೆ.ವಿ.ಉಮಾ ದೇವಿ ಹಾಗೂ ಆರ್.ಹೊರಕೇರಪ್ಪ ಅವರು ಹಿರಿಯೂರು ಉಪನೋಂದಣಿ ಕಚೇರಿಯಲ್ಲಿ ಕಳೆದ 2017ರ ಫೆ.13ರಂದು ಜಂಟಿ ಖಾತೆಯಾಗಿ ನೋಂದಣಿ ಮಾಡಿಸಿಕೊಂಡಿದ್ದರು.
ಆದರೆ ಆರ್.ಹೊರಕೇರಪ್ಪರಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾನೂನು ಬಾಹಿರವಾಗಿ ಖಾತೆ ಮತ್ತು ಇ-ಸ್ವತ್ತು ಮಾಡಿಕೊಟ್ಟಿರುವ ಪಿಡಿಒ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂಬ ಹಿರಿಯೂರು ತಾಪಂ ಇಒ ಶಶಿಧರ್ ಅವರ ಪತ್ರ, ಉಮಾದೇದೇವಿ ಅವರ ದೂರು ಹಾಗೂ ಜಿಪಂ ಉಪಕಾರ‌್ಯದರ್ಶಿ ಕೆ.ತಿಮ್ಮಪ್ಪ ಮತ್ತು ಸಹಾಯಕ ಕಾರ‌್ಯದರ್ಶಿ ಈಶ್ವರ ಪ್ರಸಾದ್ ಅವರ ಜಂಟಿ ತನಿಖಾ ವರದಿ ಆಧರಿಸಿ ಬಸವರಾಜು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸಿಇಒ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net