ಅಕ್ಟೋಬರ್‌ನಲ್ಲಿ ಆಳಂದಗೆ ಸಿಎಂ, ಡಿಸಿಎಂ

1408Aland1
ಆಳಂದನಲ್ಲಿನ ಅಮರ್ಜಾ ಅಣೆಕಟ್ಟೆಗೆ ಶಾಸಕ ಬಿ.ಆರ್.ಪಾಟೀಲ್ ಅವರು ಬಾಗಿನ ಅರ್ಪಿಸಿದರು. ಶ್ರೀ ಹವಾ ಮಲ್ಲಿನಾಥ ಮಹಾರಾಜ, ಅಣ್ಣಾರಾವ ಪಾಟೀಲ್, ಮಾನಪ್ಪ ಕಟ್ಟಿಮನಿ, ತಮ್ಮರಾಯ ಪಾಟೀಲ್ ಇತರರಿದ್ದರು.
Published on

ಆಳಂದ: ಅಕ್ಟೋಬರ್ ಕೊನೆಯ ವಾರದಲ್ಲಿ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರೂ ಆದ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.

ಅಮರ್ಜಾ ಅಣೆಕಟ್ಟೆಗೆ ಗುರುವಾರ ಬಾಗಿನ ಅರ್ಪಿಸಿದ ಅವರು, ಅಮರ್ಜಾ ಅಣೆಕಟ್ಟೆ ಕಾಮಗಾರಿ ೧೯೭೨ರಲ್ಲಿ ೫.೫ ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭವಾಗಿದ್ದು, ಕೊನೆಗೆ ೨೨೫ ಕೋಟಿ ರೂ.ಗಳಲ್ಲಿ ಮುಕ್ತಾಯಗೊಂಡಿದೆ. ಆದರೂ ನೀರು ಸಂಗ್ರವಾಗುತ್ತಿಲ್ಲ. ಕಳೆದ ಅವಧಿಯಲ್ಲಿ ಭೀಮಾ ನದಿಯಿಂದ ನೀರು ತುಂಬಿಸುವ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ. ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಸಿಎಂ, ಡಿಸಿಎಂ ಆಗಮಿಸಿ ಅಮರ್ಜಾ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ತಂತ್ರಜ್ಞಾನ ಬಳಸಿ ಎಷ್ಟೇ ದೂರವಿದ್ದರೂ ಅಲ್ಲಿಗೆ ನಾವು ನೀರು ತೆಗೆದುಕೊಂಡು ಹೋಗಬಹುದು ಎಂದರು.

ಶಿರಪುರ ಮಾದರಿ ಕೆರೆಗಳು ರೈತರಿಗೆ ಅನುಕೂಲವಾಗಿವೆ. ಪ್ರತಿಪಕ್ಷದವರು ಟೀಕೆ ಮಾಡಿದರೆ ಸಾಲದು ವಾಸ್ತವ ಸ್ಥಿತಿ ಅರಿತು ಮಾತನಾಡಬೇಕು. ಈ ಮಾದರಿಯಲ್ಲಿ ಹೆಚ್ಚಿನ ಕೆರೆ ನಿರ್ಮಾಣಕ್ಕೆ ಸರ್ಕಾರದಿಂದ ೫೦ ಕೋಟಿ ರೂ. ಮಂಜೂರು ಆಗಿದೆ. ಅಲ್ಲದೆ ಕೆರೆಆರ್‌ಡಿಬಿಯಿಂದ ೫೦ ಕೋಟಿ ರೂ. ಮಂಜೂರು ಮಾಡಿಸಿಕೊಂಡು ಬರುತ್ತಿz್ದೆÃನೆ. ಕ್ಷೇತ್ರದೆಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ಅಮರ್ಜಾ ಹಾಗೂ ಹಲವು ಕೆರೆಗಳಲ್ಲಿ ನೀರು ತುಂಬುತ್ತಿವೆ, ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವೆ ಎಂದು ನುಡಿದರು.

ನಿರಗುಡಿಯ ಶ್ರೀ ಹವಾ ಮಲ್ಲಿನಾಥ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ತಹಸೀಲ್ದಾರ್ ಅಣ್ಣಾರಾವ ಪಾಟೀಲ್, ಇಒ ಮಾನಪ್ಪ ಕಟ್ಟಿಮನಿ, ಡಿವೈಎಸ್‌ಪಿ ತಮ್ಮರಾಯ ಪಾಟೀಲ್, ನೀರಾವರಿ ಇಲಾಖೆ ಅಧಿಕಾರಿ ಮಾಲೆ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ್, ಪ್ರಮುಖರಾದ ಗುರುಶರಣ ಪಾಟೀಲ್ ಕೋರಳ್ಳಿ, ರಾಜಶೇಖರ ಪಾಟೀಲ್ ಚಿತಲಿ, ಪಂಡಿತ ಶೇರಿಕಾರ, ಭೀಮರಾಯ ಢಗೆ, ವೈಜನಾಥ ಝಳಕಿ, ಬಸವರಾಜ ತಡಕಲ್, ರಾಜಶೇಖರ ಯಂಕAಚಿ, ಮೋಹನಗೌಡ ಪಾಟೀಲ್, ಗುರುಶಾಂತ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net