

ಹುಬ್ಬಳ್ಳಿ: ಉತ್ತರ ಕರ್ನಾಟಕದ ಹುಡುಗ ಬೆಳಗಾವಿಯ ಸಚಿನ್ ಧನಪಾಲ ನಾಯಕ ನಟನಾಗಿ ಅಭಿನಯಿಸಿರುವ ‘ಚಾಂಪಿಯನ್‘ ಸಿನಿಮಾ ಅಕ್ಟೋಬರ್ ಮೊದಲ ವಾರ ಬಿಡುಗಡೆಯಾಗಲಿದೆ ಎಂದು ನಿಮಾಪಕ, ಇಲ್ಲಿನ ಉಣಕಲ್ ನಿವಾಸಿ ಶಿವಾನಂದ ನೀಲನ್ನವರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಥ್ಲೆಟಿಕ್ ಕ್ರೀಡಾಪಟು ಒಬ್ಬನ ಸಾಧನೆಯ ಹಾದಿಯ ಕುರಿತು ಕಮರ್ಷಿಯಲ್ ಸಿನಿಮಾ ನಿರ್ವಿುಸಲಾಗಿದೆ. ಅದ್ದೂರಿಯಾಗಿ ಸಿನಿಮಾ ಮೂಡಿ ಬಂದಿದೆ. ಸಿನಿಮಾದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ, ರಂಗಾಯಣ ರಘು, ಅವಿನಾಶ, ಮಂಡ್ಯ ರಮೇಶ ಮತ್ತಿತರರು ನಟಿಸಿದ್ದಾರೆ. ಚಿಕ್ಕಣ್ಣ ಹಾಗೂ ಪ್ರಶಾಂತ ಸಿದ್ದಿಕಿ ಅವರ ಜೋಡಿ ಕಾಮಿಡಿ ಕಚಗುಳಿ ನೀಡಲಿದೆ. ಅಜನೀಶ ಲೋಕನಾಥ ಸಂಗೀತ, ವಿನೋದ ಸಾಹಸ, ಸರ್ವಣನ್ ನಟರಾಜನ್ ಛಾಯಾಗ್ರಹಣ ಮಾಡಿದ್ದಾರೆ ಎಂದರು.
ಆ. 11ರಂದು ಸಂಜೆ 4 ಗಂಟೆಗೆ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಚಾಂಪಿಯನ್ ಸಿನಿಮಾದ ಪ್ರಚಾರಾರ್ಥವಾಗಿ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪೈಲ್ವಾನ್ ಅಶೋಕ ಚಿಲ್ಲಣ್ಣವರ, ಸಿದ್ದು ಮಾಯಣ್ಣವರ, ಇತರರಿದ್ದರು.
‘ಡಿಂಗರ ಬಿಲ್ಲಿ’ ಹಾಡಿಗೆ ಸನ್ನಿ ಲಿಯೋನ್: ಈ ಭಾಗದವರೇ ಆದ ಶಿವು ಬೇರ್ಗಿ ಅವರು ರಚಿಸಿರುವ ‘ಡಿಂಗರ ಬಿಲ್ಲಿ’ ಹಾಡಿಗೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದಾರೆ. ಈ ಹಾಡು ಈಗಾಗಲೇ ಯೂಟ್ಯೂಬ್ನಲ್ಲಿ 1 ಮಿಲಿಯನ್ಗಿಂತ ಹೆಚ್ಚು ವೀಕ್ಷಣೆಯಾಗುವ ಮೂಲಕ ಸಿನಿಪ್ರಿಯರ ಮನಸು ಗೆದ್ದಿದೆ ಎಂದು ನಟ ಸಚಿನ್ ಧನಪಾಲ ತಿಳಿಸಿದರು.