ಅಕ್ಕಿ ಅಕ್ರಮ ಸಾಗಣೆ, ಓರ್ವನ ಬಂಧನ

17Kokatanur1
ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಪಿಕ್‌ಅಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿರುವುದು.
Published on

ಕೊಕಟನೂರ: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಗುರುವಾರ ರಾತ್ರಿ ಬಂಧಿಸಿದ್ದಾರೆ.

ರಬಕವಿ ಪಟ್ಟಣದ ತೌಫಿಕ್ ಇಲಾಯಿ ಮುಲ್ಲಾ ಬಂಧಿತ ವ್ಯಕ್ತಿ. ಪಿಕ್‌ಅಪ್ ವಾಹನದಲ್ಲಿ 1.2 ಟನ್ ಅಕ್ಕಿಯಿದ್ದ ಚೀಲ ತುಂಬಿಕೊಂಡು ಸತ್ತಿ ಗ್ರಾಮ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ಖಚಿತ ಮಾಹಿತಿ ಪಡೆದುಕೊಂಡ ಅಧಿಕಾರಿಗಳು ದಾಳಿ ನಡೆಸಿದ್ದರು.

ಅಥಣಿ ತಾಲೂಕು ಕೃಷ್ಣಾ ನದಿ ದಡದ ಸವದಿ, ಸವದಿ ದರ್ಗಾ, ಜನವಾಡ, ಮಹಿಷವಾಡಗಿ, ನಂದೇಶ್ವರ, ಸತ್ತಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅನ್ನಭಾಗ್ಯದ ಅಕ್ಕಿ ಸಂಗ್ರಹಿಸಿ ನೆರೆಯ ಮಹಾರಾಷ್ಟಕ್ಕೆ ಸಾಗಿಸುತ್ತಿದ್ದೆ ಎಂದು ವಿಚಾರಣೆಯಲ್ಲಿ ಆತ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಥಣಿ ಠಾಣೆಯಲ್ಲಿ ದೂರು ದಾಖಲಾಗಿದೆ. ಪಿಎಸ್‌ಐ ಕುಮಾರ ಹಾಡಕಾರ, ಆಹಾರ ನಿರೀಕ್ಷಕ ಸಂತೋಷ ಬುಡ್ಡರ ಕಾರ್ಯಾಚರಣೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net