

ನುಗ್ಗೇಹಳ್ಳಿ: ಹೋಬಳಿಯ ಅಕ್ಕನಹಳ್ಳಿ ಕೂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ತಾಲೂಕಿನಲ್ಲಿ 2491 ರೈತರಿಗೆ 14.31 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಅಕ್ಕನಹಳ್ಳಿ ಕೂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ 170 ರೈತರಿಗೆ 62.30 ಲಕ್ಷ ರೂ. ಹಾಗೂ ಹತ್ತು ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳಿಗೆ 62 ಲಕ್ಷ ರೂ. ಸಾಲ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ರೈತರಿಗೆ ಸಾಲ ಮನ್ನಾ ಯೋಜನೆಯಿಂದ ರೈತರಿಗೆ ಅನುಕೂಲವಾಗಿದೆ. ಶೂನ್ಯ ಬಡ್ಡಿ ದರದಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ನೀಡಲಾಗುತ್ತಿದೆ. ನುಗ್ಗೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರನ್ನು ನೇಮಿಸುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಗ್ರಾ.ಪಂ.ಅಧ್ಯಕ್ಷೆ ರತ್ನಮ್ಮ, ತಿಮ್ಮ ಶೆಟ್ಟಿ, ಸದಸ್ಯರಾದ ಪುಟ್ಟರಾಜು, ರಾಜಕುಮಾರ್, ಸೌಭಾಗ್ಯ, ಸಂಘದ ಅಧ್ಯಕ್ಷ ಎ.ಪಿ ಉಮೇಶ್, ಉಪಾಧ್ಯಕ್ಷೆ ಶಾಂತಮ್ಮ, ಮೇಲ್ವಿಚಾರಕರಾದ ಅಭಿಲಾಶ್, ಮಧು, ಕಾರ್ಯನಿರ್ವಹಣಾಧಿಕಾರಿ ಎ.ಟಿ.ರವಿ, ಮುಖಂಡರಾದ ಬಿ.ಆರ್.ದೊರೆಸ್ವಾಮಿ, ತೋಟಿ ನಾಗರಾಜು, ಎಂ.ಆರ್.ವಾಸು, ಎಚ್.ಸಂಪತ್‌ಕುಮಾರ್, ನವೀನ್, ದಯಾನಂದ, ಇಂದ್ರಜಿತ್, ವಿಕ್ಟರ್, ಇನಾಸಪ್ಪ, ಗಣೇಶ್, ಸಂಘದ ನಿರ್ದೇಶಕರು, ಗ್ರಾಮಸ್ಥರು ಹಾಜರಿದ್ದರು.