ಅಕಾಲಿಕ ಮಳೆಯಿಂದಾಗಿ ಬೆಳೆ ಜಲಾವೃತ

3 Srinivaspur 1C
Published on

ಶ್ರೀನಿವಾಸಪುರ: ತಾಲೂಕಿನಲ್ಲಿ ಅಕಾಲಿಕ ಮಳೆಯಿಂದಾಗಿ ರಾಜಕಾಲುವೆ ಮತ್ತು ಕೆರೆ ಭೂಪ್ರದೇಶ ಒತ್ತುವರಿ ಮಾಡಿಕೊಂಡು ಬೆಳೆದಿದ್ದ ಟೊಮ್ಯಾಟೊ, ಭತ್ತ, ಮಾವು ಮತ್ತಿತರೆ ಬೆಳೆಗಳು ಜಲಾವೃತಗೊಂಡಿದ್ದು, ತುಂಬಿ ಕೋಡಿ ಹರಿಯಬೇಕಾಗಿದ್ದ ಕೆರೆಗಳಲ್ಲಿ ಅರ್ಧ ನೀರು ನಿಂತಿದೆ.

ಒತ್ತುವರಿಯಾಗಿರುವ ಜಮೀನುನಲ್ಲಿನ ಬೆಳೆಗಳನ್ನು ಉಳಿಸಿಕೊಳ್ಳಲು ಒತ್ತುವರಿದಾರರು ಕೆರೆ ತೂಬು ತೆರೆದು ನೀರನ್ನು ಹೊರಗೆ ಬಿಡಲು ಚಿಂತಿಸುತ್ತಿದ್ದಾರೆ. ಆದ್ದರಿಂದ ಪ್ರಸ್ತುತ ಶೇಖರಣೆಯಾಗಿರುವ ನೀರಿನ ಸದ್ಬಳಕೆಯತ್ತ ಸಣ್ಣ ನೀರಾವರಿ ಇಲಾಖೆ, ತಾಲೂಕು ಆಡಳಿತ ಗಮನಹರಿಸಬೇಕು. ತೂಬು ತೆರೆದವರಿಗೆ ಶಿಕ್ಷೆ ಮತ್ತು ದಂಡದ ಬಗ್ಗೆ ಮಾಹಿತಿ ನೀಡಬೇಕಿದೆ. ಮುಂಜಾಗ್ರತಾ ಕ್ರಮಗಳಿಂದಾಗಿ ತಾಲೂಕಿನಲ್ಲಿ ಬೇಸಿಗೆಯಲ್ಲಿ ಕನಿಷ್ಠ ನೀರಿನ ಕೊರತೆ ಉಂಟಾಗುವುದಿಲ್ಲ. ನಿರ್ದಿಷ್ಟ ಪ್ರಮಾಣದಲ್ಲಿ ರೈತರು ಅಂತರ್ಜಲ ಬಳಸಿ ಬೆಳೆ ಬೆಳೆಯಬಹುದು. ಇದರಿಂದ ರೈತರ ವಲಸೆ ಸಹ ತಪ್ಪಿಸಬಹುದು.

ತಾಲೂಕಿನಲ್ಲಿ ಕೆರೆ ಒತ್ತುವರಿ ತೆರವುಗೊಳಿಸಲಾಗಿದ್ದು, ಅಕಾಲಿಕ ಮಳೆಯಿಂದ ಇನ್ನು ಹಲವು ಕೆರೆ ಒತ್ತುವರಿ ತೆರವಿಗೆ ಹಿನ್ನಡೆಯಾಗಿದೆ. ಕೆರೆಯಂಗಳದಲ್ಲಿ ಬೆಳೆದಿರುವ ಮಾವು ಹಾಗೂ ತರಕಾರಿ ಬೆಳೆ ರಕ್ಷಣೆ ಮಾಡಲು ಅವಕಾಶ ನೀಡುವುದಿಲ್ಲ. ತೂಬುಗಳಿಂದ ನೀರು ಹರಿಸಲು ಬಿಡುವುದಿಲ್ಲ. ಒತ್ತುವರಿದಾರರು ನೀರು ಬಿಡಲು ಮುಂದಾದರೆ ಕ್ರಮ ಕೈಗೊಳ್ಳಲಾಗುವುದು. ಎಸ್.ಎಂ.ಶ್ರೀನಿವಾಸ್, ತಹಸೀಲ್ದಾರ್ ತಾಲೂಕಿನಲ್ಲಿ ಬಹುತೇಕ ಕೆರೆ ಒತ್ತುವರಿಯಾಗಿ ಮಾವು, ತರಕಾರಿ ಬೆಳೆಯಲಾಗಿದೆ. ಇದೀಗ ಅಕಾಲಿಕ ಮಳೆಯಿಂದ ಎಲ್ಲವೂ ಜಲಾವೃತಗೊಂಡಿವೆ. ಕೆರೆ ಒತ್ತುವರಿ ತೆರವಿನ ತೆಗೆ ಹೂಳು ತೆಗೆಯುವ ಕೆಲಸವಾಗಬೇಕು. ತೂಬುಗಳನ್ನು ಭದ್ರಪಡಿಸಬೇಕು. ಶ್ರೀರಾಮರೆಡ್ಡಿ, ತಾಲೂಕು ಅಧ್ಯಕ್ಷ, ರೈತ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net