ಅಕಾಲಿಕ ಮಳೆ; ರೈತರಲ್ಲಿ ಆತಂಕ

SOR WEEEEEEEEB
Published on

ಸೊರಬ: ತಾಲೂಕಿನ ಕೆಲವೆಡೆ ಮಂಗಳವಾರ ತುಂತುರು ಮಳೆಯಾಗಿದೆ. ಜಡೆ, ಆನವಟ್ಟಿ, ಉಳವಿ, ಚಂದ್ರಗುತ್ತಿ, ಕುಪಗಡ್ಡೆ ಹೋಬಳಿಯ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಕೆಲವರು ಭತ್ತ ಕಟಾವು ಮಾಡಿದ್ದು ಮಳೆಯಲ್ಲಿ ನೆನೆದಿದೆ. ಜೋಳದ ಕೊಂಡಿಗೆ ಕಟಾವು ಭರದಿಂದ ನಡೆಯುತ್ತಿದ್ದು, ಕೆಲ ರೈತರು ಕಾಳು ಬೇರ್ಪಡಿಸಿ ಒಣ ಹಾಕಿದ್ದಾರೆ. ಅಡಕೆ ಕೊಯ್ಲು ನಡೆಯುತ್ತಿದ್ದು, ಅಕಾಲಿಕ ಮಳೆಯಿಂದ ಆತಂಕ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net