ಅಂಬೇವಾಡಿಯಲ್ಲಿ ಕೋವಿಡ್ ಕೇಂದ್ರ ಸ್ಥಾಪನೆಗೆ ವಿರೋಧ

31 dnd1 a
Published on

ದಾಂಡೇಲಿ: ನಗರದ ಅಂಬೇವಾಡಿಯ ಬಂಗೂರನಗರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ನಿಲಯದಲ್ಲಿ ಕೋವಿಡ್-19 ಕೇಂದ್ರ ಸ್ಥಾಪನೆ ವಿರೋಧಿಸಿ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲಾರ್ ಕಚೇರಿಯ ಶಿರಸ್ತೇದಾರ್ ಗೋಪಿ ಚವ್ಹಾಣ ಮೂಲಕ ಸಲ್ಲಿಸಿದರು.

ಇಲ್ಲಿ ಕ್ವಾರಂಟೈನ್ ಕೇಂದ್ರದ ಸಿದ್ಧತೆಯ ಕಾರ್ಯ ಚುರುಕುಗೊಂಡಿದ್ದು, ಈ ಪ್ರದೇಶದಲ್ಲಿ ಖಾಸಗಿ ಬ್ಯಾಂಕ್, ಬಸ್ ನಿಲ್ದಾಣ, ಹೆಸ್ಕಾಂ ಕಚೇರಿ, ಕಿರಾಣಿ ಅಂಗಡಿಗಳು ಗ್ಯಾರೇಜ್​ಗಳಿದ್ದು ಈ ಭಾಗದಲ್ಲಿ ಜನರ ಓಡಾಟ ಹೆಚ್ಚಿದೆ ಹೀಗಾಗಿ ಇಲ್ಲಿ ಕೋವಿಡ್-19 ಕೇಂದ್ರ ಸ್ಥಾಪನೆ ಸರಿಯಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ರಫಿಕ್ ಕಾನ್, ಗಿರಿಜಾ ಹುಲಿಕೊಪಕರ್, ಎ.ಜಿ. ಹುಕ್ಕರಿ, ಸುಶೀಲಕುಮಾರ ಗಿರಿ, ಮಂಜುಳಾ ಸಾಲಕ್ಕಿ, ಫಿರೋಜ ಪಿರಜಾದೆ, ಎಚ್.ಬಿ. ಕೊನ್ನೂರ, ಫರಜಾನಾ ಎಂ. ಮುಲ್ಲಾ, ಸಿ.ಎಲ್. ಸೋನಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net