ಅಂಬೇಡ್ಕರ್‌ರಿಂದ ಮಹಿಳಾ ಸಮಾನತೆ ಸಾಧ್ಯವಾಯಿತು

08rajesh2
Published on

ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮೂಲಕ ದೇಶದಲ್ಲಿ ಮಹಿಳೆಯರಿಗೆ ಅಮಾನ ಅವಕಾಶಗಳು ಸಾಧ್ಯವಾಯಿತು ಎಂದು ಭೋಗಾಪುರ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜು ಹೇಳಿದರು.

ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಪರಿವರ್ತನಾ ಅಧ್ಯಯನ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರನ್ನು ಕೇವಲ ಗಂಡಸಿನ ಗುಲಾಮಳು ಎಂದು ಕಾಣಲಾಗುತ್ತಿತ್ತು. ಆದರೇ ಸ್ವಾತಂತ್ರ್ಯ ನಂತರ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮಹಿಳೆಯರಿಗೆ ಸಮಾನ ಸ್ಥಾನಮಾನಗಳನ್ನು ಕಲ್ಪಿಸಿದರು. ಪ್ರಸ್ತುತ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಪುರುಷರಷ್ಟೇ ಪ್ರಾಬಲ್ಯವನ್ನು ಸಾಧಿಸಿದ್ದಾರೆ. ಅಂತರರಾಷ್ಟ್ರೀಯ ಮಹಿಳಾ ದಿನದಂದು ಮಹಾತ್ಮ ಜ್ಯೋತಿ ಬಾುಲೆ, ಸಾವಿತ್ರಿ ಬಾುಲೆ, ಅಂಬೇಡ್ಕರ್ ಹಾಗೂ ರಮಾಬಾಯಿ ಅವರನ್ನು ನಾವೆಲ್ಲರೂ ಸ್ಮರಣೆ ಮಾಡಬೇಕು ಎಂದರು.

ಈ ಆಧುನಿಕ ಯುಗದಲ್ಲಿ ಪ್ರತಿಯೊಂದು ರಂಗದಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ರಾಜಕೀಯ, ಸಾಮಾಜಿಕ, ಶಿಕ್ಷಣ, ಕ್ರೀಡೆ ಮತ್ತು ರಾಜಕೀಯ ರಂಗದಲ್ಲಿ ಪುರುಷರಷ್ಟೇ ಸಮಾನವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದು ಕುಟುಂಬ ಅಭಿವೃದ್ಧಿಯಲ್ಲಿ ಸೀಯರ ಪಾತ್ರ ಅಪಾರವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೆಂಪರಾಜು, ಪ್ರಧಾನ ಕಾರ್ಯದರ್ಶಿ ಸಿ.ಎಂ.ಶಿವಕುಮಾರ್, ಶಿಕ್ಷಕಿಯರಾದ ಸುಶೀಲಾ, ಶಿವಕುಮಾರಿ, ಭವಾನಿದೇವಿ, ನೀಲಮ್ಮ, ಶಶಿಕಲಾ, ಭಾಗ್ಯಮ್ಮ, ಮೊಹನ್ ಕುಮಾರಿ, ಲೀಲಾವತಿ, ಮಹೇಶ್, ರವಿ ಅರಸು, ಮಹಾದೇವಸ್ವಾಮಿ ಚಂದಕವಾಡಿ, ಸಿದ್ದರಾಜು, ಲಿಂಗರಾಜು, ಎಸ್.ಜಿ.ರಾಜು, ವೈ.ಎಸ್.ಮಹಾದೆವಯ್ಯ, ನಂಜುಂಡಸ್ವಾಮಿ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net