

ಕಲಬುರಗಿ: ನಗರದ ಹೊರವಲಯದಲ್ಲಿ ನೂರು ಎಕರೆ ಪ್ರದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೨೫ ಅಡಿ ಪ್ರತಿಮೆ ಸ್ಥಾಪಿಸಬೇಕು ಎಂದು ಡಾ.ಅಂಬೇಡ್ಕರ್ ತರುಣ ಸಂಘದ ಮಾಜಿ ಅಧ್ಯP್ಷÀ ಸುನಿಲ್ ಇಟಗಿ ಆಗ್ರಹಿಸಿದರು. ಏಪ್ರಿಲ್ ೧೪ರಂದು ಜಗತ್ ವೃತ್ತದಲ್ಲಿರುವ ಅಂಬೇಡ್ಕರ್ ಮೂರ್ತಿ ಬಳಿ ಜಯಂತಿ ಆಚರಣೆಗೆ ಸ್ಥಳ ಇಕ್ಕಟ್ಟಾಗಿದೆ. ನಗರದ ಹೊರವಲಯದಲ್ಲಿ ಸರ್ಕಾರಿ ಜಮೀನು ನೂರು ಎಕರೆ ಪ್ರದೇಶ ಗುರುತಿಸಿ ಅಲ್ಲಿ ಡಾ. ಅಂಬೇಡ್ಕರ್ ಮ್ಯೂಸಿಯಂ ಸ್ಥಾಪಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಈ ಬಗ್ಗೆ ಜಿಲ್ಲೆಯ ಎಲ್ಲ ಶಾಸಕರು, ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಆ.೨೪ರಂದು ನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು. ಪ್ರಶಾಂತ ಕಂಟಿ, ಶಿವಶರಣಪ್ಪ ಖನ್ನಾ, ಮಂಜುನಾಥ ಕಂಠಿ ಇತರರಿದ್ದರು.
ಚಿತ್ರ: ೦೯೦೮ ಕೆಎಲ್‌ಬಿ ೦೨
ಕಲಬುರಗಿಯಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಸ್ಲಂ ಜನರಿಗೆ ಹಾಲು, ಹಣ್ಣು ವಿತರಿಸಿ ಬಸವ ಪಂಚಮಿಯನ್ನು ಶುಕ್ರವಾರ ಆಚರಿಸಲಾಯಿತು. ಸಮಿತಿ ಜಿ¯್ಲÁ ಸಂಚಲಕ ಸುರೇಶ ಹಾದಿಮನಿ, ಅಲ್ಲಮಪ್ರಭು ನಿಂಬರ್ಗಾ, ಶಿವಶರಣಪ್ಪ ದೇವನೂರು, ಮಲ್ಲಿಕಾರ್ಜುನ ಸಿಂಗೆ, ಬ್ರಹ್ಮಾನಂದ ಮಿಂಚಕರಣ, ಶಿವಕುಮಾರ ಚಿಂಚೋಳಿ, ಪಂಡಿತ ಭೈರಾಮಡಗಿ, ರಾಘವೇಂದ್ರ ಇತರರಿದ್ದರು.