ಅಂಬೇಡ್ಕರ್‌ಗೆ ಕಾಂಗ್ರೆಸ್ ಅನ್ಯಾಯ

AMBARAY ASTAGI
Published on

ಕಲಬುರಗಿ: ಡಾ.ಅಂಬೇಡ್ಕರ್‌ನ್ನು ಸೋಲಿಸಿದ ಕಾಂಗ್ರೆಸ್ಸಿಗರು ಇದೀಗ ಅವರನ್ನು ಗುತ್ತಿಗೆ ಪಡೆದಂತೆ ಆಡುತ್ತಿz್ದÁರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಆರೋಪಿಸಿದರು.
ಅಂಬೇಡ್ಕರ್ ನಿಧನರಾದಾಗ ಅಂತ್ಯಕ್ರಿಯೆಗೆ ಸ್ಥಳ ನೀಡಲಿಲ್ಲ. ಮುಂಬೈನಲ್ಲಿ ಅನಾಥ ಶವಗಳನ್ನು ಅಂತ್ಯಕ್ರಿಯೆ ಮಾಡುವ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಜವಾಹರ್ ಲಾಲ್ ನೆಹರು ಅಂಬೇಡ್ಕರ್‌ರನ್ನು ಎರಡು ಬಾರಿ ಸ್ವತಃ ಪ್ರಚಾರ ಮಾಡಿ ಸೋಲಿಸಿದ್ದರು. ಬಾಬಾ ಸಾಹೇಬರ ಹೆಸರು ಹೇಳು ನೈತಿಕತೆ ಇಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೆಹಲಿಯಲ್ಲಿ ರಾಜೀವ ಗಾಂಧಿ, ಇಂದಿರಾಗಾAಧಿ, ನೆಹರು ಸಮಾಧಿ ನಿರ್ಮಿಸಲು ಹತ್ತಾರು ಎಕರೆ ಪಡೆದಿದ್ದಾರೆ. ಗಾಂಧಿಗಳು ತಾವೇ ಭಾರತ ರತ್ನ ಪಡೆದುಕೊಂಡರು. ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್‌ರ ಪಂಚ ತೀರ್ಥ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದರು ಎಂದರು.
ಮೋದಿ ಸಂವಿಧಾನಕ್ಕೆ ನಮಸ್ಕರಿಸಿ, ಸಂಸತ್ ಪ್ರವೇಶಿಸಿದರು. ಬಲಗೈ ಸಮುದಾಯಕ್ಕೆ ಅವಮಾನ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಬಲಗೈ ಸಮುದಾಯದ ಎಲ್ಲರೂ ಬಿಜೆಪಿ ಜತೆಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಮರೆಪ್ಪ ಬಡಿಗೇರ, ಮಹಾಪೌರ ವಿಶಾಲ ಧರ್ಗಿ, ಶಿವಯೋಗಿ ನಾಗನಳ್ಳಿ, ಸಂತೋಷ ಹಾದಿಮನಿ, ಜೈಭೀಮ ಕಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net