

ಚಿಕ್ಕಮಗಳೂರು: ಶೋಷಿತರು ಮುಂಚೂಣಿಗೆ ಧಾವಿಸುವ ಹಾಗೂ ಅಧಿಕಾರ ಪಡೆಯಲಿಚ್ಚಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಸಿದ್ಧಾಂತವನ್ನು ಪ್ರತಿಬಿಂಬಿಸುವ ಪಕ್ಷವನ್ನು ಕೈಬಲಪಡಿಸುವುದು ಪ್ರತಿಯೊಬ್ಬರ ಧ್ಯೇಯವಾಗಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದರು.
ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶವನ್ನಾಳಿದ ಎರಡು ರಾಷ್ಟಿçÃಯ ಪಕ್ಷಗಳ ಕೊಡುಗೆ ದೇಶಕ್ಕೆ ಶೂನ್ಯವಾಗಿದೆ. ನೆಹರು ಕಾಲಘಟ್ಟದಿಂದ ಮೋದಿ ಕಾಲದವರೆಗೂ ಶೋಷಿತರಿಗೆ ಸ್ಪಂದಿಸುವ ಗುಣ ಬೆಳೆಸಿಕೊಂಡಿಲ್ಲ. ಒಂದೆಡೆ ಬಿಜೆಪಿ ಧರ್ಮಗಳ ನಡುವೆ ವಿಷಬೀಜ ಭಿತ್ತಿದರೆ, ಇನ್ನೊಂದೆಡೆ ಕಾಂಗ್ರೆಸ್ ದಲಿತರ ಮತಕ್ಕಾಗಿ ಓಲೈಕೆ ರಾಜಕಾರಣ ಮಾಡಿ ಅಧಿಕಾರ ಗಿಟ್ಟಿಸಿಕೊಳ್ಳುತ್ತಿದೆ ಎಂದು ದೂರಿದರು.
ನೂರಾರು ವರ್ಷಗಳಿಂದ ವಾಸಿಸುತ್ತಿರುವ ಬಹುಜನರಿಗೆ ಇಂದಿಗೂ ಸ್ವಂತ ನಿವೇಶನ, ಭೂಮಿಗಳಿಲ್ಲ. ಕೇಂದ್ರ ಸರ್ಕಾರ ರೈತರಿಗೆ ಸ್ಪಂದಿಸುತ್ತಿಲ್ಲ ಹಾಗೂ ವಿದ್ಯಾವಂತ ಯುವಕರಿಗೆ ಉದ್ಯೋಗ ಒದಗಿಸದಿರುವ ಕಾರಣ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆ ಹೆಚ್ಚುತ್ತಿದೆ. ಉದ್ಯಮಿಗಳಿಗೆ ಪರೋಕ್ಷವಾಗಿ ಸಾಲಮನ್ನಾ ಮಾಡುವ ಕೇಂದ್ರ ರೈತರಿಗೆ ಬೆಳೆಪರಿಹಾರ ನೀಡದೇ ವಂಚಿಸುತ್ತಿದೆ ಎಂದು ಆರೋಪಿಸಿದರು.
ದೇಶದ ಬೆನ್ನೆಲು ರೈತರಿಗೆ ನೆರವಾಗುತ್ತೇವೆ ಎಂದೇಳುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಚಟುವಟಿಕೆ ಬಳಸುವ ಕೀಟನಾಶಕ, ರಸಗೊಬ್ಬರಗಳನ್ನು ಐದುಪಟ್ಟು ಬೆಲೆಏರಿಸಿ, ಹಿಂಬದಿಯಿAದ ಅದೇ ರೈತರಿಗೆ ಕಿಸಾನ್ ಸಮಾನ್ ಯೋಜನೆಯಡಿ ವಾರ್ಷಿಕ ೬ ಸಾವಿರ ಹಣವನ್ನು ಜಮಾವಣೆ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಸರ್ಕಾರಿ ವಲಯದ ಸಂಸ್ಥೆಗಳು ಖಾಸಗೀಕರಣಗೊಂಡು ಹಲವಾರು ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ಯುವಕರಿಗೆ ಹೊಸದಾಗಿ ಉದ್ಯೋಗ ಕಲ್ಪಿಸುವುದಾಗಿ ಪ್ರಧಾನ ಮಂತ್ರಿಗಳು ಪೊಳ್ಳು ಭರವಸೆ ನೀಡುತ್ತಿರುವುದು ಹಾಸ್ಯಾಸ್ಪದ. ಕೇಂದ್ರದ ನಡೆ ರೈತರಿಗೆ ಸುಣ್ಣವಾದರೆ, ಉದ್ಯಮಿಗಳಿಗೆ ಬೆಣ್ಣೆ ಎಂದು ಆರೋಪಿಸಿದರು.
ಪ್ರಪಂಚದಲ್ಲೇ ಭಾರತ ಹಸಿವಿನಿಂದ ಹೆಚ್ಚು ಬಳಲುತ್ತಿದ್ದು, ಇದಕ್ಕೆ ಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಆಳ್ವಿಕೆಯೇ ನೇರ ಕಾರಣ. ಕಾಂಗ್ರೆಸ್‌ನಲ್ಲಿ ನೆಪಮಾತ್ರಕ್ಕೆ ಮಾತ್ರ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರಾಗಿಸಿದೆಯೇ ಹೊರತು ದಲಿತರಿಗೆ ದಕ್ಕಬೇಕಾದ ಅಧಿಕಾರ ಇಂದಿಗೂ ದೊರೆತಿಲ್ಲ. ಅಲ್ಲದೇ ಅಂಬೇಡ್ಕರ್ ಅಂತ್ಯಸAಸ್ಕಾರಕ್ಕೂ ಕಾಂಗ್ರೆಸ್ ಅವಕಾಶ ಕಲ್ಪಿಸಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಹಿಂದಾ ಮುಖವಾಡ ಧರಿಸಿ ದಲಿತರು, ಹಿಂದುಳಿದವರು ಹಾಗೂ ಶೋಷಿತರಿಗೆ ಮಂಕುಬೂದಿ ಎರಚುತ್ತಿದೆ. ಎಸ್ಸಿ, ಎಸ್ಟಿಗೆ ಮೀಸಲಿಟ್ಟಿದ ಸಾವಿರಾರು ಕೋಟಿ ರೂ. ಹಣವನ್ನು ಪಕ್ಷದ ಚಟುವಟಿಕೆ ಹಾಗೂ ಇನ್ನಿತರೆ ಕಾರ್ಯಕ್ಕೆ ದುರ್ಬಳಕೆ ಮಾಡಿಕೊಂಡು ಜನಸಾಮಾನ್ಯರಿಗೆ ಕಣ್ಣೋರೆಸುವ ತಂತ್ರಗಾರಿಕೆ ರೂಪಿಸುತ್ತಿದೆ ಎಂದರು.
ಇದೀಗ ರಾಜ್ಯದ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಹಿಂದೆ ಕೈಗೊಂಡ ಮೂರು ಪಕ್ಷದ ಸಾಧನೆಗಳನ್ನು ಚರ್ಚಿಸದೇ, ಪರಸ್ಪರ ಕೆಸರೆಚಾಟ ನಡೆಸುತ್ತಿವೆ. ಸಿದ್ದರಾಮಯ್ಯ ವಿರುದ್ಧ ಮೂಡಾ ಪ್ರಕರಣವಾದರೆ, ಬಿಜೆಪಿ ವಿರುದ್ಧ ಶೇ. ೪೦ರಷ್ಟು ಭ್ರಷ್ಟಾಚಾರ ಪ್ರಕರಣಗಳನ್ನು ಮುಂದಿಟ್ಟುಕೊAಡು ಮತಯಾಚನೆ ನಡೆಸುತ್ತಿರುವುದು ದುರ್ದೈವ ಎಂದು ಹೇಳಿದರು.
ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಝಾಕೀರ್ ಹುಸೇನ್ ಮಾತನಾಡಿ, ರಾಜ್ಯ ಸಮಿತಿಗೆ ನೂತನವಾಗಿ ಆಯ್ಕೆಗೊಂಡಿರುವ ಪದಾಧಿಕಾರಿಗಳು ಮುಂಬರುವ ಚುನಾವಣೆಗಳಲ್ಲಿ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪದಾಧಿಕಾರಿಗಳಿಗೆ ಶಕ್ತಿ ತುಂಬುವ ಕಾರ್ಯ ಮಾಡುತ್ತಿದೆ ಎಂದರು.
ಹಲವಾರು ದಾರ್ಶನಿಕರು, ಸಂತರು ಬಿಟ್ಟಿದ್ದ ಚಳವಳಿಯನ್ನು ಅಂಬೇಡ್ಕರ್ ಹಾಗೂ ಕಾನ್ಷಿರಾಂರವರು ವಿಚಲೀತರಾಗದೇ ತಮ್ಮ ಸುಖ ಹಾಗೂ ನೆಮ್ಮದಿಯನ್ನು ಬದಿಗಿರಿಸಿ, ಶೋಷಿತರಿಗೆ ನೆರವಾಗಲು ಹೋರಾಟ ನಡೆಸಿ ಮಹಿಳೆಯರಿಗೆ ಸವಲತ್ತು, ಪ್ರತಿ ನಾಗರೀಕರಿಗೆ ಮತದಾನದ ಹಕ್ಕು ಒದಗಿಸಿದ್ದಾರೆ. ದೇಶದಲ್ಲಿ ಸಂವಿಧಾನವನ್ನು ಯಥಾವತ್ತಾಗಿ ಜಾರಿಗೊಳಿಸಿದರೆ ಬಡವರು, ಉದ್ಯೋಗ ವಂಚಿತರು ಇಲ್ಲದ ವಾತಾವರಣ ನಿರ್ಮಾಣ ಮಾಡಬಹುದು ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ವಹಿಸಿದ್ದರು. ಬಿಎಸ್ಪಿ ರಾಜ್ಯ ಸಂಯೋಜಕ ಅಶೋಕ್ ಚಕ್ರವರ್ತಿ, ಉಸ್ತುವಾರಿ ಗಂಗಾಧರ್ ಬಹುಜನ್, ಕಾರ್ಯದರ್ಶಿ ಕೆ.ಬಿ.ಸುಧಾ, ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ, ತಾಲೂಕು ಅಧ್ಯಕ್ಷ ಎಚ್.ಕುಮಾರ್, ಮುಖಂಡರಾದ ಪರಮೇಶ್, ಜಾಕೀರ್ ಆಲಿಖಾನ್, ಗಂಗಾಧರ್, ವೇಲಾಯುಧನ್, ಮಂಜಯ್ಯ, ಶಂಕರ್, ಪಿ.ಕೆ.ಮಂಜುನಾಥ್ ಮತ್ತಿತರರಿದ್ದರು.