ಅಂಬೇಡ್ಕರ್ ಮಹಾನ್ ಮಾನವತಾವಾದಿ; ಭಾರತದ ಸಂವಿಧಾನ ವಿಶ್ವಮಾನ್ಯ: ಹರತಾಳು ಹಾಲಪ್ಪ

SGR WEEEBBB
Published on

ಸಾಗರ: ಡಾ. ಬಿ.ಆರ್.ಅಂಬೇಡ್ಕರ್ ಮಹಾನ್ ಮಾನವತಾವಾದಿ, ಅವರು ರಚನೆ ಮಾಡಿದ ಸಂವಿಧಾನವನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ನಗರಸಭೆ ಆವರಣದಲ್ಲಿ ಮಂಗಳವಾರ ನಗರಸಭೆ ಡಾ. ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಜಗತ್ತಿನ ಯಾವ ರಾಷ್ಟ್ರಗಳೂ ಭಾರತದ ಸಂವಿಧಾನದಷ್ಟು ವಿಶಿಷ್ಟತೆ ಹೊಂದಿಲ್ಲ. ಎಲ್ಲ ಜಾತಿ, ಜನಾಂಗ ಸಹಬಾಳ್ವೆಯಿಂದ ಸಾಗುವ ಮತ್ತು ಎಲ್ಲರಿಗೂ ಹಕ್ಕು ಕರ್ತವ್ಯಗಳನ್ನು ನೀಡಿರುವ ಸಂವಿಧಾನವನ್ನು ನಮ್ಮದು. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಜಾತ್ಯತೀತ ಪರಿಕಲ್ಪನೆಗೆ ಸಂವಿಧಾನ ಬಹುದೊಡ್ಡ ಅರ್ಥ ನೀಡಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಸಂವಿಧಾನದ ಮೂಲಕ ಯುವ ಜನರಿಗೆ ಪರಿಚಯಿಸುವ ಕೆಲಸ ಆಗಬೇಕು ಎಂದರು.

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ಎಲ್ಲರೂ ಸಮಾನತೆಯಿಂದ ಬದುಕಲು ಅಂಬೇಡ್ಕರ್ ನೀಡಿರುವ ಸಂವಿಧಾನವೇ ಕಾರಣವಾಗಿದೆ. ಮಹಿಳೆಯರಿಗೂ ಹಕ್ಕುಬಾಧ್ಯತೆ ನೀಡಿದ ಸಂವಿಧಾನ ಭಾರತದ್ದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net