ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಾಗದಲ್ಲಿ ಕಟ್ಟಡ ನಿರ್ಮಾಣ ಆರೋಪ; ತೆರವಿಗೆ ಆಗ್ರಹಿಸಿ ಮನವಿ

SGR WEEEEEb
Published on

ಸಾಗರ: ತಾಲೂಕಿನ ಶಿರವಂತೆ ಗ್ರಾಪಂ ವ್ಯಾಪ್ತಿಯ ಲಂಡಿಗೇರಿ ಎಸ್.ಸಿ.ಕಾಲನಿಯಲ್ಲಿ ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಾಗದಲ್ಲಿ ಅತಿಕ್ರಮವಾಗಿ ನಿರ್ಮಿಸಿರುವ ಶೆಡ್ ಅನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಗುರುವಾರ ಗ್ರಾಮಸ್ಥರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಡಿಎಸ್‌ಎಸ್ ಜಿಲ್ಲಾ ಮುಖಂಡ ರೇವಪ್ಪ ಕೆ.ಹೊಸಕೊಪ್ಪ ಮಾತನಾಡಿ, ಲಂಡಿಗೇರಿಯಲ್ಲಿ ಅಂಬೇಡ್ಕರ್ ಭವನಕ್ಕೆ ಕಾಯ್ದಿರಿಸಿದ ಜಾಗದಲ್ಲಿ ಅಕ್ರಮವಾಗಿ ಮಹಿಳೆ ಶೆಡ್ ನಿರ್ಮಿಸಿಕೊಂಡಿದ್ದಾರೆ. ಗ್ರಾಮಸ್ಥರು ತಡೆಯಲು ಮುಂದಾದಾಗ ದಬ್ಬಾಳಿಕೆ ನಡೆಸಿದ್ದಾರೆ. ತಕ್ಷಣ ಭವನಕ್ಕೆ ಮೀಸಲಿಟ್ಟ ಜಾಗದಲ್ಲಿ ನಿರ್ಮಿಸಿರುವ ಶೆಡ್ ತೆರವುಗೊಳಿಸಬೇಕು. ಒತ್ತುವರಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಶಿರವಂತೆ ಗ್ರಾಪಂ ಸದಸ್ಯ ಲೋಕೇಶ್ ಗಾಳಿಪುರ ಮಾತನಾಡಿ, ಲಂಡಿಗೆರೆ ಗ್ರಾಮದಲ್ಲಿ ಚೆನ್ನಯ್ಯ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದರು.

ಗ್ರಾಪಂ ಸದಸ್ಯ ಅನಿಲ್ ಗೌಡ ಮಾತನಾಡಿ, ತಕ್ಷಣ ಶೆಡ್ ತೆರವುಗೊಳಿಸದೆ ಹೋದಲ್ಲಿ ತಹಸೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net