ಅಂಬೇಡ್ಕರ್​ ಭವನ ಸದ್ಬಳಕೆ ಮಾಡಿಕೊಳ್ಳಬೇಕು

9
Published on

ಮೂಡಲಗಿ: ಸಾಮಾಜಿಕ, ಧಾರ್ಮಿಕ ಹಾಗೂ ವಿವಿಧ ಚಟುವಟಿಕೆಗಳಿಗೆ ಅಂಬೇಡ್ಕರ್​ ಭವನ ಸದ್ಬಳಕೆ ಆಗಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಈಚೆಗೆ 20 ಲ ರೂ. ವೆಚ್ಚದ ಡಾ.ಬಿ.ಆರ್​. ಅಂಬೇಡ್ಕರ್​ ಭವನ ಮತ್ತು 16 ಲ ರೂ. ವೆಚ್ಚದ ಮೆಥೋಡಿಸ್ಟ್​ ಚರ್ಚಿನ ಕಾಂಪೌಂಡ್​ ಉದ್ಘಾಟಿಸಿ ಮಾತನಾಡಿದರು. ಸಮಾಜಕ್ಕೆ ಅನುಕೂಲವಾಗಲು ಭವನವನ್ನು ನಿರ್ಮಿಸಿದ್ದು, ಗ್ರಾಮಸ್ಥರು ಸ್ವಚ್ಛತೆ ಕಾಪಾಡಬೇಕು. ಭವನವು ಸಭೆ, ಸಮಾರಂಭ ಆಯೋಜಿಸಲು ಎಲ್ಲರಿಗೂ ಸದುಪಯೋಗವಾಗಲಿದೆ ಎಂದರು.

ಗ್ರಾಮದ ಅಭಿವೃದ್ಧಿಗಾಗಿ ಸರ್ಕಾರದಿಂದ ವಿವಿಧ ಯೋಜನೆಗಳನ್ನು ಒದಗಿಸಲಾಗಿದ್ದು, ಎಂದಿಗೂ ಪಪಾತ ಮಾಡಿಲ್ಲ. ಮೂರು ದಶಕಗಳಿಂದ ಅರಬಾವಿ ೇತ್ರದ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸಲಾಗುತ್ತಿದೆ. ಎಲ್ಲ ಸಮಾಜಗಳನ್ನು ಒಗ್ಗೂಡಿಸುವ ಮೂಲಕ ಎಲ್ಲರನ್ನು ಅಭಿವೃದ್ಧಿಪಡಿಸುವ ಆಶಯ ನನ್ನದು. ಗ್ರಾಮದ ಅಭಿವೃದ್ಧಿಗೆ ಶ್ರಮಿಸುವೆ ಎಂದರು.

ರೇ. ಅಬ್ರಾಹಂ ಎಚ್​. ಮತ್ತು ಾ. ಮ್ಯಾಥ್ಯೂ ಎಚ್​. ಅಧ್ಯತೆ ವಹಿಸಿದ್ದರು. ಯುವ ಮುಖಂಡ ಸವೋರ್ತ್ತಮ ಜಾರಕಿಹೊಳಿ, ಮುಖಂಡರಾದ ಲಕ್ಷ$್ಮಣ ಹುಚ್ಚರೆಡ್ಡಿ, ಬಸಪ್ಪ ಸಂಕನ್ನವರ, ರಾಮಪ್ಪ ಕೆಂಚರೆಡ್ಡಿ, ಮುತ್ತೆಪ್ಪ ಕೊಪ್ಪದ, ಗುರುಪುತ್ರ ದಡ್ಡಿಮನಿ, ಗ್ಯಾನಪ್ಪ ಮಾರಾಪೂರ, ರಾಮಪ್ಪ ಅವರಾದಿ, ಯಾಕೂಬ್​ ಹಾದಿಮನಿ, ಯೋಹಾನ ಹಾದಿಮನಿ, ಯೋಹನಾ ಮಾರಾಪೂರ, ಸುಂದರ ಹಾದಿಮನಿ, ಯಶವಂತ ನಡುವಿನಮನಿ, ಶಿವಲಿಂಗ ಹಾದಿಮನಿ, ರಾಜೇಶ ದಡ್ಡಿಮನಿ, ಉದಯ ಸನದಿ, ಈರಪ್ಪ ಜಿನಗನ್ನವರ, ನಾಗಪ್ಪ ಪೂಜೇರಿ, ಅಶೋಕ ಮಾಚಕನೂರ, ವಿದ್ಯಾ ಪೂಜೇರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net