ಅಂಬೇಡ್ಕರ್ ಭವನ ಪೂರ್ಣಗೊಳಿಸುವುದೇ ನನ್ನ ಗುರಿ

kgl-2
Published on

ಕೊಳ್ಳೇಗಾಲ: ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ನೂತನ ಅಧ್ಯಕ್ಷ ಎಸ್.ಆನಂದಮೂರ್ತಿ ಅವರು ಗುರುವಾರ ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಬಳಿಕ ಹಳೇ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಪೂರ್ವ ನಿಗದಿಯಂತೆ ವಿದೇಶಕ್ಕೆ ತೆರಳಿದ್ದೆ. ಅದರೂ ನನ್ನ ಗೆಲುವಿಗೆ ಭೀಮನಗರ ಎಲ್ಲ ಹಿರಿಯರು, ಕಿರಿಯರು ಸಹಕಾರದಿಂದ ನಾನು ಆಯ್ಕೆಯಾಗಿದ್ದೇನೆ ಎಂದರು.

ಯಾವುದೇ ಕಳಂಕ ಬಾರದ ರೀತಿಯಲ್ಲಿ ನನೆಗುದ್ದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಪೂರ್ಣಗೊಳಿಸಿ ಭೀಮನಗರ ಜನರಿಗೆ ಅರ್ಪಿಸುವುದೇ ನನ್ನ ಗುರಿ. ಅಂತೆಯೇ, ಬೆಂಗಳೂರು ರಸ್ತೆಯಲ್ಲಿರುವ ಭೀಮನಗರದ ಆಸ್ತಿಯ ದಾಖಲಾತಿಗಳನ್ನು ಸಂಗ್ರಹಿಸಿ ವಶಕ್ಕೆ ಪಡೆಯಬೇಕಿದೆ. ಇದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಮಾಜಿ ಪದಾಧಿಕಾರಿಗಳು, ಭೀಮನಗರದ ಯಜಮಾನರು, ಮಾಜಿ ಯಜಮಾನರು ಹಾಗೂ ಮುಖಂಡರ ಸಹಕಾರ ಬೇಕಿದೆ. ಮುಖ್ಯವಾಗಿ ನನೆಗುದ್ದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಉದ್ಘಾಟನೆ ಮಾಡುವವರೆಗೂ ನಾನು ಯಾವುದೇ ಹಾರವಾಗಲಿ ಹಾಗೂ ಸನ್ಮಾನವಾಗಲಿ ಸ್ವೀಕರಿಸುವುದಿಲ್ಲ ಎಂದು ಹೇಳಿದರು.

ಇಂದಿನ ಸಭೆಯಲ್ಲಿ ಭೀಮನಗರದ ಮುಖಂಡರು ನೀಡಿದ್ದ ಸಲಹೆಗಳನ್ನು ಚರ್ಚಿಸಿ ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಉಪಾಧ್ಯಕ್ಷ ಕಿರಣ್, ಕಾರ್ಯದರ್ಶಿ ಪಾಪಣ್ಣ, ಸಹ ಕಾರ್ಯದರ್ಶಿ ಶಶಿಧರ, ಖಜಾಂಚಿ ರಾಜೇಶ್, ಭೀಮನಗರ ಯಜಮಾನ ನಟರಾಜು, ಹಿರಿಯ ಮುಖಂಡ ಲಿಂಗರಾಜು, ಕೆ.ನಾಗರಾಜು, ನಗರಸಭೆ ಸದಸ್ಯ ಮಂಜುನಾಥ್, ಮಾಜಿ ಅಧ್ಯಕ್ಷ ರಮೇಶ್, ಮಾಜಿ ಸದಸ್ಯ ಕೆ.ಕೆ.ಮೂರ್ತಿ, ಸಿದ್ದಪ್ಪಾಜಿ, ಮಣಿ, ದಿಲೀಪ್, ಜಗದೀಶ್, ರಾಜಶೇಖರ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net