ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಾಸಕರಿಂದ ಭೂಮಿಪೂಜೆ

IMG_20230823_144141
ಬೆಳಗುಲಿ ಗ್ರಾಮದಲ್ಲಿ 12 ಲಕ್ಷದ ವೆಚ್ಚದ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ಲೋಕೇಶ್, ಬೆಳಗಳ್ಳಿ ಪುಟ್ಟಸ್ವಾಮಿ, ಕೆಂಪಯ್ಯ, ದೊಡ್ಡಯ್ಯ, ಶಿವರಾಜ್, ರವಿಕುಮಾರ್ ಇತರರು ಇದ್ದರು.
Published on

ನುಗ್ಗೇಹಳ್ಳಿ: ಸಂತೇಶಿವರ, ಬೆಳಗುಲಿ, ಹೊನ್ನಮ್ಮನಕೆರೆಗೆ ತಿಪಟೂರಿಗೆ ಹೋಗುವ ಹೇಮಾವತಿ ಕಾಲುವೆಯಿಂದ 25 ಕೋಟಿ ರೂ. ವೆಚ್ಚದಲ್ಲಿ ನದಿಯಿಂದ ನೀರು ಹರಿಸುವ ಪೈಪ್‌ಲೈನ್ ಕಾಮಗಾರಿ ಪ್ರಾರಂಭವಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಬುಧವಾರ ತಿಳಿಸಿದರು.

ಹೋಬಳಿಯ ಬೆಳಗುಲಿ ಕಾಲೋನಿಯಲ್ಲಿ 12 ಲಕ್ಷ ರೂ. ವೆಚ್ಚದ ಅಂಬೇಡ್ಕರ್ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ 10 ಕೆರೆಗಳಿಗೆ ನೀರು ಹರಿಸುವ ಪೈಪ್‌ಲೈನ್ ಕಾಮಗಾರಿ 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಬಾರಿ ಮಳೆ ವಾಡಿಕೆಗಿಂತ ಕಡಿಮೆಯಾಗಿರುವುದರಿಂದ ಸರ್ಕಾರ ಕೂಡಲೇ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ರೈತರ ಸಂಕಷ್ಟಕ್ಕೆ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯತಿ ಸದಸ್ಯ ಲೋಕೇಶ್, ಮುಖಂಡರಾದ ಬೆಳಗಳ್ಳಿ ಪುಟ್ಟಸ್ವಾಮಿ, ಬೆಳಗುಲಿ ಕೆಂಪಯ್ಯ, ಮಂಜುನಾಥ್, ಜೈ ಲಿಂಗೇಗೌಡ, ಕೆಂಪೇಗೌಡ, ಶಿಕ್ಷಕ ಶಿವರಾಜ್, ಚಂದ್ರು, ದೊಡ್ಡಯ್ಯ, ಶಿವನಂಜಯ, ಎಂ.ಆರ್.ರವಿಕುಮಾರ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net