ಅಂಬೇಡ್ಕರ್, ಬಾಬೂಜಿ ಜನ್ಮದಿನ ಆಚರಣೆ

RemasterDirector_1a5c03258
RemasterDirector_1a5c03258
Published on

ಪಿರಿಯಾಪಟ್ಟಣ: ಪಟ್ಟಣದ ತಾಲೂಕು ಕ್ರೀಡಾಂಗಣದ ಆವರಣದಲ್ಲಿ ಶನಿವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್ ಜನ್ಮದಿನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ತಾಲೂಕಿನ ದಸಂಸ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಪಿಎಂಸಿ ಆವರಣದ ಬಳಿ ಸಚಿವ ಕೆ.ವೆಂಕಟೇಶ್ ಇಬ್ಬರು ನಾಯಕರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನಡೆಸಿ ಮೆರವಣಿಗೆಗೆ ಚಾಲನೆ ನೀಡಿದರು. ಟಿಬೆಟಿಯನ್ ಬೌದ್ಧ ಬಿಕ್ಕುಗಳು, ವಿವಿಧ ಕಲಾತಂಡಗಳು, ದಸಂಸ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಎಪಿಎಂಸಿ ಆವರಣದ ಬಳಿಯಿಂದ ಬಸವೇಶ್ವರ ವೃತ್ತದವರೆಗೆ ಬಿ.ಎಂ.ರಸ್ತೆಯಲ್ಲಿ ಸಾಗಿ ಬಂದ ಮೆರವಣಿಗೆ ಕ್ರೀಡಾಂಗಣದವರೆಗೆ ಸಾಗಿತು.

ಮುಖಂಡರಾದ ಎಸ್.ರಾಮು, ತಮ್ಮಣ್ಣಯ್ಯ, ಸೀಗೂರು ವಿಜಯ್ ಕುಮಾರ್, ಪಿ.ಮಹದೇವ್, ಪಿ.ಪಿ.ಮಹದೇವ್, ರವಿ, ಚೌತಿ ಮಲ್ಲಣ್ಣ, ಮಂಜು, ಭೂತನಹಳ್ಳಿ ಶಿವಣ್ಣ, ಸೋಮಶೇಖರ್, ಶೇಖರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net