ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

1blrp1
Published on

ಬೇಲೂರು: ದೇಶದ ಚರಿತ್ರೆಯಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಸಂಗತಿಯೆಂದರೆ ಭೀಮ ಕೊರೆಗಾಂವ್ ವಿಜಯೋತ್ಸವ ಎಂದು ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಗಂಗಾಧರ್ ಬಹುಜನ್ ಹೇಳಿದರು.


ಕೊರೆಗಾಂವ್ ವಿಜಯೋತ್ಸವ ಅಂಗವಾಗಿ ಪಟ್ಟಣದಲ್ಲಿ ಡಾ.ಅಂಬೇಡ್ಕರ್ ಪ್ರತಿಮೆಗೆ ಸೋಮವಾರ ಮಾಲಾರ್ಪಣೆ ಸಲ್ಲಿಸಿ ಮಾತನಾಡಿದ ಅವರು, ಕ್ರಿ.ಶ.1818ರ ಜ.1ರಂದು ಮಹಾರಾಷ್ಟ್ರದಲ್ಲಿ 500 ಮಹಾರ್ ಸೈನಿಕರು ಪೇಶ್ವೆಯ 28 ಸಾವಿರ ಸೈನಿಕರ ವಿರುದ್ಧ ಸ್ವಾಭಿಮಾನ, ಸಮಾನತೆ ಹಾಗೂ ಆತ್ಮ ಗೌರವಕ್ಕಾಗಿ ಯುದ್ಧದಲ್ಲಿ ಗೆಲುವು ಸಾಧಿಸಿದ ದಿನ. ಜಗತ್ತಿನಲ್ಲೇ ಇಂತಹ ರೋಚಕ ಯುದ್ಧವನ್ನು ಕಾಣಲು ಸಾಧ್ಯವಿಲ್ಲ. ಕಾರಣ ಮಹರ್ ಸೈನಿಕರು ಸಾಮ್ರಾಜ್ಯ ವಿಸ್ತರಣೆಗಾಗಿ, ರಾಜ ಮತ್ತೊಬ್ಬ ರಾಜನ ವಿರುದ್ಧ ದಂಡೆತ್ತಿ ಯುದ್ಧ ಮಾಡಿದ್ದಲ್ಲ. ಆದರೆ ಯಾವ ದೇಶದಲ್ಲಿ ಮನುಷ್ಯರನ್ನು ಮನುಷ್ಯರಾಗಿ ನೋಡದೆ ಅಸಮಾನತೆಯಿಂದ ಶ್ರೇಣಿಕೃತ ಜಾತಿ ವ್ಯವಸ್ಥೆಯಿಂದ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದ್ದರೂ ಅವುಗಳ ವಿರುದ್ಧ ಸಿಡಿದೆದ್ದು ಪೇಶ್ವೆಗಳ ಸೈನ್ಯದ ವಿರುದ್ಧ ಗೆಲುವು ಸಾಧಿಸಿದ ದಿನ. ಈ ದಿನದಂದು ಡಾ.ಅಂಬೇಡ್ಕರ್ ಪ್ರತಿವರ್ಷ ಕೋರೆಗಾಂವ್‌ನಲ್ಲಿರುವ ವಿಜಯಸ್ತಂಭಕ್ಕೆ ಹೋಗಿ ಗೌರವ ಸಲ್ಲಿಸುತ್ತಿದ್ದರು. ಅದರಂತೆ ಬಿಎಸ್‌ಪಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಯೋಧರಿಗೆ ಗೌರವ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.


ಬಿಎಸ್‌ಪಿ ಕೇಂದ್ರ ಸಮಿತಿ ನಿರ್ಧಾರದಂತೆ ಮಾಯಾವತಿ ಜನ್ಮದಿನದ ಅಂಗವಾಗಿ ರಾಷ್ಟ್ರಾದ್ಯಂತ ಆರ್ಥಿಕ್ ಸಹಯೋಗ್ ದಿವಸ ಆಂದೋಲನ ಆಚರಿಸುವ ಮೂಲಕ ದೇಣಿಗೆ ಸಂಗ್ರಹಿಸಿ ಪಕ್ಷ ಸಂಘಟನೆಗೆ ಮುಂದಾಗಿದ್ದೇವೆ ಎಂದರು.


ಜಿಲ್ಲಾ ಕಾರ್ಯದರ್ಶಿ ರಾಜು, ಜಿಲ್ಲಾ ಉಪಾಧ್ಯಕ್ಷ ಲೋಹಿತ್, ತಾಲೂಕು ಸಂಯೋಜಕ ಉಮೇಶ್, ಉಪಾಧ್ಯಕ್ಷ ನಿಂಗರಾಜು, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಕಾನೂನು ಸಲಹೆಗಾರ ರಾಜೇಶ್, ಕಾರ್ಯದರ್ಶಿ ಶ್ರೀನಾಥ್, ಮಲ್ಲೇಶ್, ಹೊನ್ನಯ್ಯ, ಪರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net