

ಚಿತ್ರದುರ್ಗ: ಒಳ ಮೀಸಲು ಜಾರಿ ಪರ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸ್ವಾಗತಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಸಂಭ್ರಮಿಸಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ದಲಿತ ಮುಖಂಡ ಬಾಳೆಕಾಯಿ ಶ್ರೀನಿವಾಸ್, ತಿಪ್ಪೇಸ್ವಾಮಿ, ನಾಗರಾಜ್, ಕರಿಯಪ್ಪ, ಹನುಮಂತಪ್ಪ, ಮಹಾಂತೇಶ್, ಕಾಂತರಾಜ್, ಕುಂಚಿಗನಹಾಳ್ ಮಹಾಲಿಂಗಪ್ಪ, ಕೆ.ರಾಜಣ್ಣ, ಬಂಗಾರಪ್ಪ, ಬಿ.ರಾಜಪ್ಪ, ಅನಂತರಾಜು, ಬಂಗಾರಪ್ಪ, ಶಿವಣ್ಣ, ನಾಗರಾಜ್, ಕೆಂಚಪ್ಪ ಇತರರಿದ್ದರು.