ಅಂಬೇಡ್ಕರ್​ ಪ್ರತಿಮೆ ಅನಾವರಣ ಮೇ 3ರಂದು

Dr BR Ambedkar
Published on

ಕಲಬುರಗಿ: ಅಫಜಲಪುರ ತಾಲೂಕಿನ ಗೊಬ್ಬುರ(ಬಿ) ಗ್ರಾಮದಲ್ಲಿ ಮೇ 3ರಂದು ಬೆಳಗ್ಗೆ 11ಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ ಬೃಹತ್​ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ಪ್ರತಿಮೆ ಅನಾವರಣ ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷ, ಕಾಂಗ್ರೆಸ್​ ಮುಖಂಡ ಅರುಣಕುಮಾರ ಎಂ.ಪಾಟೀಲ್​ ಹೇಳಿದರು.

ಗೊಬ್ಬುರ ಗ್ರಾಮಸ್ಥರ ಹಲವು ವರ್ಷಗಳ ಕನಸಾಗಿದ್ದ ಪ್ರತಿಮೆಯ ಇದೀಗ ಸಾಕಾರಗೊಳ್ಳುತ್ತಿದೆ. ಪ್ರತಿಮೆಯನ್ನು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ರ್ಖಗೆ ಉದ್ಘಾಟಿಸಲಿದ್ದಾರೆ. ಚಿಣಮಗೇರಿಯ ಶ್ರೀ ಸಿದ್ಧರಾಮ ಶಿವಾಚಾರ್ಯರು, ಬೀದರ್​ ಜಿಲ್ಲೆಯ ಅಣದೂರಿನ ಭಂತೆ ವರಜ್ಯೋತಿ ಥೇರೊ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಸಕ ಎಂ.ವೈ.ಪಾಟೀಲ್​ ಸಮಾರಂಭದ ಅಧ್ಯಕ್ಷತೆ ವಹಿಸುವರು. ಗೌರವ ಉಪಸ್ಥಿತಿಯಾಗಿ ಸಚಿವರಾದ ಪ್ರಿಯಾಂಕ್​ ರ್ಖಗೆ, ಡಾ.ಶರಣಪ್ರಕಾಶ ಪಾಟೀಲ್​, ಶರಣಬಸಪ್ಪ ದರ್ಶನಾಪುರ, ಈಶ್ವರ ಖಂಡ್ರೆ, ಕೆಕೆಆರ್​ಡಿಬಿ ಅಧ್ಯಕ್ಷ ಡಾ.ಅಜಯ ಸಿಂಗ್​, ಶಾಸಕರಾದ ಕನೀಜ್​ ಾತಿಮಾ, ಬಿ.ಆರ್​.ಪಾಟೀಲ್​, ಅಲ್ಲಮಪ್ರಭು ಪಾಟೀಲ್​, ಸಂಸದ ರಾಧಾಕೃಷ್ಣ ದೊಡ್ಡಮನಿ, ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ಎಂಎಲ್ಸಿ ಚಂದ್ರಶೇಖರ ಪಾಟೀಲ್​ ಗಣ್ಯರು ಪಾಲ್ಗೊಳ್ಳುವರು ಎಂದರು.

ಮುಖಂಡರಾದ ಅರುಣಕುಮಾರ ಪಾಟೀಲ್​ ಗೊಬ್ಬುರ, ಪ್ರಕಾಶ ಜಮಾದಾರ, ಸಿದ್ದು ಶಿರಸಗಿ, ರೇಣುಕಾ ಸಿಂಗೆ, ಸಿದ್ಧಾರ್ಥ ಬಸರಿಗಿಡ, ರಾಜು ಪಿಸ್ತಿ, ಬಸವರಾಜ ನಿಂಬಾಳ, ಪ್ರವಿಣ, ಶರಣು ನವಲೇಕರ್​ ಇತರರಿದ್ದರು.

==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net