ಅಂಬೇಡ್ಕರ್ ಪುತ್ಥಳಿಗೆ ಮೊಮ್ಮಗನಿಂದ ಪುಷ್ಪಾರ್ಚನೆ

ald ambedkar
ಆಲ್ದೂರಿನಲ್ಲಿ ಅಂಬೇಡ್ಕರ್ ಅವರ ಮೊಮ್ಮಗ ಡಾ .ರಾಜರತ್ನ ಅವರನ್ನು ಬೃಹತ್ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
Published on

ಆಲ್ದೂರು: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿ ಉದ್ಘಾಟಿಸಲಾಯಿತು.

ಬುಧವಾರ ಅಂಬೇಡ್ಕರ್ ಅವರ ಮೊಮ್ಮಗ ಡಾ. ರಾಜರತ್ನ ಅಂಬೇಡ್ಕರ್ ಅವರು ಆಲ್ದೂರಿಗೆ ಭೇಟಿ ನೀಡಿ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಪಟ್ಟಣದ ಕೆಳ ಬಸ್ ನಿಲ್ದಾಣದ ಬಳಿಯಿಂದ ತೆರೆದ ವಾಹನದಲ್ಲಿ ಬ್ಯಾಂಡ್‌ಸೆಟ್‌ನೊಂದಿಗೆ ಬೃಹತ್ ಮೆರವಣಿಗೆಯಲ್ಲಿ ರಾಜರತ್ನ ಅವರನ್ನು ಪಟ್ಟಣಕ್ಕೆ ಸ್ವಾಗತಿಸಲಾಯಿತು. ಮೆರವಣಿಗೆಯಲ್ಲಿ ಬಂದ ಅವರು ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ಇಂಥ ಅಪರೂಪದ ಸನ್ನಿವೇಶದಿಂದ ಸ್ಥಳೀಯರು ಸಂತಸಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net