

ಬೀದರ್: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ನೂತನ ಪುತ್ಥಳಿ ಅನಾವರಣ ಹಾಗೂ ಸಮಾನತೆ ಹರಿಕಾರ ವಿಶ್ವಗುರು ಬಸವಣ್ಣನವರ ಕಲ್ಯಾಣ ಮಂಟಪ ಅಡಿಗಲ್ಲು ಸಮಾರಂಭ ಅ. 14ರಂದು ಬೆಳಗ್ಗೆ 11.45ಕ್ಕೆ ನೌಬಾದ್ ಚೌಳಿ ಕಮಾನ ಹತ್ತಿರದ ಆಟೋನಗರದಲ್ಲಿ ಆಯೋಜಿಸಲಾಗಿದೆ.
ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು, ಪೂಜ್ಯ ಭಂತೆ ಜ್ಞಾನಸಾಗರ, ಇಮಾನುವೆಲ್ ಪಾಸ್ಟರ್ ಅವರ ಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಶಾಸಕ ಬಂಡೆಪ್ಪ ಖಾಶೆಂಪುರ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹುಮನಾಬಾದ್ ತಾಪಂ ಅಧ್ಯಕ್ಷರಾದ ದಲಿತ ಮುಖಂಡ, ರಮೇಶ ಡಾಕುಳಗಿ, ಆಯೋಜಕ ಶಶಿಕುಮಾರ ಪೊಲೀಸ್ ಪಾಟೀಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಭಗವಂತ ಖೂಬಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ರಾಜಶೇಖರ ಪಾಟೀಲ್, ರಹೀಮ್ ಖಾನ್, ರಘುನಾಥರಾವ ಮಲ್ಕಾಪುರೆ, ವಿಜಯಸಿಂಗ್, ಅರವಿಂದ ಅರಳಿ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ಪಾಲ್ಗೊಳ್ಳುವರು ಎಂದರು.
ಕರೊನಾ ಹಿನ್ನೆಲೆಯಲ್ಲಿ ಸರ್ಕಾರ, ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪರಸ್ಪರ ಅಂತರ ಕಾಪಾಡುವ ಜತೆಗೆ ಎಲ್ಲರೂ ಕಡ್ಡಾಯ ಮಾಸ್ಕ್ ಧರಿಸಿಕೊಂಡು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಮುಖರಾದ ಬಾಬು ಪಾಸ್ವಾನ್, ಪಪ್ಪು ಪಾಟೀಲ್ ಖಾನಾಪುರ, ಸ್ವಾಮಿದಾಸ ಕೆಂಪೆನೋರ್, ಮೌಲಪ್ಪ ಮಾಳಗೆ ಇತರರಿದ್ದರು.