ಅಂಬೇಡ್ಕರ್​ ಜಯಂತ್ಯುತ್ಸವ ೧೪ರಂದು

A B HOSAMANI
Published on

ಕಲಬುರಗಿ: ಸಮತಾ ಸೈನಿಕ ದಳದಿಂದ ಏ.೧೪ರಂದು ಬೆಳಗ್ಗೆ ೯.೩೦ಕ್ಕೆ ನಗರದ ಎಸ್​ವಿಪಿ ವೃತ್ತದಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ೧೩೪ನೇ ಜಯಂತ್ಯುತ್ಸವ ಆಚರಿಸಲಾಗುವುದು ಎಂದು ಎಸ್​ಎಸ್​ಡಿ ರಾಷ್ಟ್ರೀಯ ಸದಸ್ಯ ಎ.ಬಿ.ಹೊಸಮನಿ ತಿಳಿಸಿದರು.

ವರಜ್ಯೋತಿ ಭಂತೆ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಅಲ್ಲಮಪ್ರಭು ಪಾಟೀಲ್​ ಉದ್ಘಾಟಕರಾಗಿ ಪಾಲ್ಗೊಳ್ಳಲಿದ್ದಾರೆ. ದಲಿತ ಮುಖಂಡ ಬಸಣ್ಣಾ ಸಿಂಗೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಾಸಕ ಬಸವರಾಜ ಮತ್ತಿಮಡು, ಮೇಯರ್​ ಯಲ್ಲಪ್ಪ ನಾಯ್ಕೋಡಿ, ಮಾಜಿ ಶಾಸಕ ದತ್ತಾತ್ರೇಯ ಸಿ.ಪಾಟೀಲ್​ ರೇವೂರ, ಎಸ್​ಎಸ್​ಡಿ ರಾಷ್ಟ್ರೀಯ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ಜಿಲ್ಲಾಧಿಕಾರಿ ೌಜಿಯಾ ತರನ್ನುಮ್​, ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ., ಎಸ್​ಪಿ ಅಡ್ಡೂರು ಶ್ರೀನಿವಾಸಲು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್​ ಆಲಂ ಖಾನ್​, ಅಭಿಯಂತರ ಸುರೇಶ ಶಮಾರ್, ರಮೇಶ ಪಟ್ಟೇದಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. ರಮೇಶ ಲಂಡನಕರ್​ ಮುಖ್ಯ ಭಾಷಣಕಾರರಾಗಿದ್ದಾರೆ ಎಂದರು.

ಡಾ.ವಿಠ್ಠಲ್​ ದೊಡ್ಡಮನಿ, ಡಾ.ಡಿ.ಜಿ.ಸಾಗರ, ಎ.ಬಿ.ಹೊಸಮನಿ, ಎಸ್​.ಜಿ.ಭಾರತಿ, ಡಾ.ಹಣಮಂತರಾಯ ದೊಡ್ಡಮನಿ, ರಾಘವೇಂದ್ರ ಭಜಂತ್ರಿ, ಯಶ್ವಂತ ಶಿಂದೆ, ಬಸವರಾಜ ಆಲಗೂಡ ಅವರಿಗೆ ವಿಶೇಷ ಸನ್ಮಾನ ನಡೆಯಲಿದೆ ಎಂದರು.

ಪಾಂಡುರಂಗ ಕೊಟ್ರೆ, ರಾಜಕುಮಾರ್​ ನಡಗೇರಿ , ರೇವಣಸಿದ್ದಪ್ಪ ಹುಳಿಪಲ್ಲೆ, ಮಹಾದೇವ ಅನವರಕರ್​, ಅಮೃತ್​ ಬಂಡೆ ,ಶಂಕರ್​ ಕೊರವಿ, ಗೌತಮ್​ ಸಂಗೋಳಗಿ, ಶಿವರಾಜ್​ ಚಲವಾದಿ, ರಾಹುಲ್​ ಹಾಗರಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net