

ಕಾಗವಾಡ: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಏ.೧೪ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ರಾಜೇಶ್ ಬುರ್ಲಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ತಾಲೂಕಾಡಳಿತದಿಂದ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುವುದು. ಶಾಸಕ ರಾಜು ಕಾಗೆ ಅಧ್ಯಕ್ಷತೆ ವಹಿಸಲಿದ್ದಾರೆ. ಅಂಬೇಡ್ಕರ್ ಕುರಿತು ಉಪನ್ಯಾಸ ಹಾಗೂ ಶಾಲಾ ಮಕ್ಕಳಿಗೆ ಪ್ರಬಂಧ, ಭಾಷಣ, ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ೫ ಸಾವಿರ ರೂ. ಬಹುಮಾನ ನೀಡಲಾಗುವುದು ಎಂದರು.
ಪಪಂ ಮುಖ್ಯಾಧಿಕಾರಿ ಕೆ.ಕೆ.ಗಾವಡೆ, ತಹಸೀಲ್ದಾರ್ ರಶ್ಮಿ ಜಕಾತಿ, ಉಪತಹಸೀಲ್ದಾರ್ ಅಣ್ಣಾಸಾಹೇಬ ಕೋರೆ, ಎಂ.ಆರ್.ಪಾಟೀಲ, ಪಿಎಸ್‌ಐ ಬಿ.ಎಸ್.ಬಿರಾದಾರ, ಸಂಜಯ ತಳವಲಕತ, ಪ್ರಕಾಶ ಧೊಂಡಾರೆ, ಬಾಳಾಸಾಹೇಬ ಕಾಂಬಳೆ, ವಿವೇಕ ಕರ್ಪೆ, ಸಚಿನ ಪೂಜಾರಿ, ಉಮೇಶ ಮನೋಜ, ಶಶಿಕಾಂತ ನಡೋಣಿ, ವಿದ್ಯಾಧರ ಧೊಂಡಾರೆ, ಅಶೋಕ ಕಾಂಬಳೆ, ಅನೀಲ ಚೌವ್ಹಾಣ, ದೀಪಕ ಕಾಂಬಳೆ, ವೆಂಕಟೇಶ ಕಾಂಬಳೆ, ಅಮಿತ ದಿಕ್ಷಾಂತ, ಮಹಾಂತೇಶ ಬಡಿಗೇರ, ಉದಯ ಖೋಡೆ, ಪಿಂಟು ಕಾಂಬಳೆ, ಸಚಿನ ಕಾಂಬಳೆ, ಮೀರಾಸಾಹೇಬ ಕಾಂಬಳೆ ಇತರರಿದ್ದರು.