ಅಂಬೇಡ್ಕರ್ ಚಿಂತನೆಗಳ ಅನುಸರಣೆ ಅಗತ್ಯ

28rajesh6
Published on

ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಆಚರಣೆ ಮಾಡುವ ಬದಲು ಅವರ ಅನುಸರಣೆ ಅಗತ್ಯವಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಬಿಪಿನ್ ನಾಗರಾಜ್ ಹೇಳಿದರು.

ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರು ಬುದ್ಧರ ಮಾರ್ಗದಲ್ಲಿ ನಡೆದು ಅಂಬೇಡ್ಕರ್ ಅವರ ಪ್ರಬುದ್ಧ ಭಾರತವನ್ನು ಕಟ್ಟಬೇಕು. ಈ ನಿಟ್ಟಿನಲ್ಲಿ ದೇಶದ ಎಲ್ಲಾ ಶೋಷಿತರು ಒಂದಾಗಬೇಕಿದೆ. ಅಂಬೇಡ್ಕರ್ ಅವರು ದೇಶದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಟ್ಟು ಹೋಗಿದ್ದಾರೆ. ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗಿ ಅವರ ಆದರ್ಶ ಹಾಗೂ ಚಿಂತನೆಗಳನ್ನು ಇಂದಿನ ಯುವಜನತೆ ಅರಿತು ಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಶ್ರೀನಿವಾಸ್, ಸದಸ್ಯರಾದ ರಂಗಸ್ವಾಮಿ, ಮುದ್ದುಮಲ್ಲಯ್ಯ, ಸರೋಜಾ, ಪುಷ್ಪಮಾಲಾ, ಶಾಂತಕುಮಾರಿ, ನಬೀಖಾನ್, ಪುಟ್ಟನಂಜಮ್ಮ, ಸುಕುಮಾರ್, ಪ್ರಶಾಂತ್, ಯಜಮಾನರಾದ ಶ್ರೀಕಂಠಯ್ಯ, ಮಹದೇವಯ್ಯ, ರಂಗಸ್ವಾಮಿ, ಬಿ.ರಂಗಸ್ವಾಮಿ, ಮಲ್ಲಯ್ಯ, ಗುರುಸಿದ್ದಯ್ಯ , ನಂಜುಂಡಯ್ಯ, ಚಿನ್ನಸಾಮಿ, ಚಿಕ್ಕ ಬಸವಯ್ಯ, ರೇವಣ್ಣ, ಮಧು, ಕೃಷ್ಣ ನಾಯಕ, ಸರಕಾರಿ ನೌಕರರ ಎನ್.ಎಸ್ ಮಹದೇವಸ್ವಾಮಿ, ರವಿ ಅರಸ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net