ಅಂಬೇಡ್ಕರ್ ಚಿಂತನೆ ಅಳವಡಿಸಿಕೊಳ್ಳಲಿ

21Rayabag2
Published on

ರಾಯಬಾಗ: ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಮುನ್ನಡೆಯಬೇಕೆಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಮಂಜೂರಾದ ೨೦ ಲಕ್ಷ ರೂ. ಅನುದಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಭವನ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದ ಮುಖಂಡರು ಮುತುರ್ವಜಿಯಿಂದ ಅಂಬೇಡ್ಕರ್ ಭವನ ಗುಣಮಟ್ಟದಲ್ಲಿ ನಿರ್ಮಿಸಿಕೊಳ್ಳಬೇಕು. ಭವನದ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಜಿಪಂ ಎಇ ಎಸ್.ಎಸ್.ಹೊಸಮನಿ, ಸದಾಶಿವ ಘೋರ್ಪಡೆ, ಅಂಕುಶ ಜಾಧವ, ಸುಭಾಷ ಕೋರೆ, ವಿಲಾಸ ಬಸನಾಯ್ಕ, ಸಂಜು ಮೈಶಾಳೆ, ನಾಗು ಢಾಲೆ, ಜಯಪಾಲ ಬಸನಾಯ್ಕ, ಪ್ರಕಾಶ ಸಂಗಣ್ಣವರ, ಜಾನು ಕೋಳಿಗುಡ್ಡೆ, ಕುಮಾರ ಖೋತ, ರಾಜು ಪೋಳ, ಮಲ್ಲು ಕಮತೆ, ತುಕಾರಾಂ ಟೊನ್ನೆ, ಅಜಿತ್ ಈರಗಾರ, ಮಹೇಂದ್ರ ಗಾಣಿಗೇರ, ರಮೇಶ ಹಾರೂಗೇರಿ, ರಾಜು ವಡ್ಡರ, ಪುರಂದರ ಕಾಂಬಳೆ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net