

ಕಲಬುರಗಿ: ಹಿಂದುಳಿದ ವರ್ಗಗಳ ಆಯೋಗವೂ ಸೆ.೨೨ರಿಂದ ಕೈಗೊಂಡಿರುವ ಸಾಮಾಜಿಕ-, ಶೈಕ್ಷಣಿಕ ಸಮೀಕ್ಷೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಬುದ್ಧನ ಅನುಯಾಯಿಗಳು ರ‍್ಮದ ಕಾಲಂನಲ್ಲಿ "ಬೌದ್ಧ' ಎಂದು ನಮೂದಿಸಬೇಕು ಎಂದು ಅಖಿಲ ರ‍್ನಾಟಕ ಬೌದ್ದ ದಾಖಲಾತಿ ಅಂದೋಲನ ಸಮಿತಿ ಪ್ರಮುಖ ಬುದ್ಧಘೋಷ ದೇವೇಂದ್ರ ಹೆಗ್ಗಡೆ ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ರ‍್ಮ ಸ್ವೀಕರಿಸಿದ್ದರು. ಅದರಂತೆ ಸಂವಿಧಾನದಲ್ಲಿಯೂ ಮೂಲ ರ‍್ಮಕ್ಕೆ ಮರಳಲು ಅವಕಾಶವಿದೆ. ಪರಿಶಿಷ್ಟ ಜಾತಿಯಲ್ಲಿಯೇ ಮುಂದುವರಿಯಲು ಇಚ್ಛಿಸುವವರು, ರ‍್ಮದ ಕಾಲಂ ೮ರ ಕ್ರಮ ಸಂಖ್ಯೆ ೬ರಲ್ಲಿರುವ ಬೌದ್ಧ ಆಯ್ಕೆ ಮಾಡಿಕೊಳ್ಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಾತಿ ಕಾಲಂ ೯ರಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ೧೦೧ ಜಾತಿಗಳಲ್ಲಿರುವ ತಮ್ಮ ಮೂಲ ಜಾತಿಯ ಹೆಸರು ದಾಖಲಿಸಬೇಕು. ಇದರಿಂದ ಯಾವುದೇ ಮೀಸಲಾತಿ ಕೈತಪ್ಪುವುದಿಲ್ಲ. ಜನರಲ್ಲಿ ಮೀಸಲಾತಿ ಕೈತಪು$್ಪವ ಭೀತಿ ಇದ್ದು, ಭಾರತದಲ್ಲಿ ಉದಯಿಸಿದ ಸಿಖ್, ಬೌದ್ಧ, ಜೈನ್ ರ‍್ಮಕ್ಕೆ ಮತಾಂತರವಾದರೆ ಹಿಂದು ರ‍್ಮದಲ್ಲಿನ ಜಾತಿಗಳ ಮೀಸಲಾತಿ ಕೈತಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಖಿಲ ರ‍್ನಾಟಕ ಬೌದ್ಧ ದಾಖಲಾತಿ ಆಂದೋಲನ ಸಮಿತಿಯಿಂದ ಸೆ.೨೧ರಂದು ಬೆಳಗ್ಗೆ ೧೧ಕ್ಕೆ ನಗರದ ಕನ್ನಡ ಭವನದಲ್ಲಿ ಜನಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಅಖಿಲ ರ‍್ನಾಟಕ ಬೌದ್ಧ ದಾಖಲಾತಿ ಆಂದೋಲನ ಸಮಿತಿ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ರ‍್ಮದ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಬೇಕು ಎಂದು ಜಿಲ್ಲೆಯ ಎಲ್ಲ ತಾಲೂಕು ಮತ್ತು ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಮರಿಯಪ್ಪ ಹಳ್ಳಿ, ರ‍್ಜುನ ಭದ್ರೆ, ಹಣಮಂತ ಬೋಧನಕರ್, ದೇವಿಂದ್ರ ಸಿನ್ನೂರಕರ್, ದಿನೇಶ ದೊಡ್ಡಮನಿ, ಸಂತೋಷ ಮೇಲಿನಮನಿ, ದತ್ತಾತ್ರೇಯ ಇಕ್ಕಳಕಿ ಇತರರಿದ್ದರು.