ಅಂಬುಲೆನ್ಸ್ ಗೆ ಅನಾರೋಗ್ಯ.

Screenshot_20201024-194420_Video Player
Published on

ವಿಜಯಪುರ: ಆಲಮೇಲ ತಾಲೂಕಿನ ತಾರಾಪುರದಲ್ಲಿನ ಕಾಳಜಿ ಕೇಂದ್ರದಲ್ಲಿನ ಅಂಬ್ಯುಲೆನ್ಸ್ ಗೆ ಸಮಸ್ಯೆ ಶುರುವಾಗಿದೆ. ಕಾಳಜಿ ಕೇಂದ್ರದಲ್ಲಿನ ಸಂತ್ರಸ್ಥರು ತಳ್ಳಿದರೂ ಅಂಬ್ಯುಲೆನ್ಸ್ ಸ್ಟಾರ್ಟ್ ಆಗಿಲ್ಲವಾದ್ದರಿಂದ ಅಂಬುಲೆನ್ಸ್ ಗೆ ಚಿಕಿತ್ಸೆ ಬೇಕಾಗಿದೆ. ಆಲಮೇಲ ತಾಲೂಕಿನ ತಾರಾಪುರ ಗ್ರಾಮದಲ್ಲಿರುವ ಕಾಳಜಿ ಕೇಂದ್ರದಲ್ಲಿದ್ದವರ ಆರೋಗ್ಯದಲ್ಲಿ ಸಮಸ್ಯೆಯಾದರೆ ಚಿಕಿತ್ಸೆಗೆ ಕರೆದೊಯ್ಯಲೆಂದು ಇಟ್ಟಿರುವ ಅಂಬ್ಯುಲೆನ್ಸ್ ಸ್ಟಾರ್ಟ್ ಆಗಿಲ್ಲ. ಅಂಬ್ಯುಲೆನ್ಸ್ ಚಾಲೂ ಮಾಡಲು ಕಾಳಜಿ ಕೇಂದ್ರದಲ್ಲಿನ ಸಂತ್ರಸ್ಥರ ಪ್ರಯತ್ನಿಸಿದ್ರೂ ಪ್ರಯೋಜನವಾಗಿಲ್ಲ. ಅಂಬ್ಯುಲೆನ್ಸ್ ಸಮಸ್ಯೆಯಿಂದ ಅಸಮಾಧಾನ ಹೊರ ಹಾಕಿದ ಕಾಳಜಿ ಕೇಂದ್ರದಲ್ಲಿದ್ದ ಸಂತ್ರಸ್ಥರು ಬೇರೆ ಸುಸ್ಥಿತಿಯಲ್ಲಿರುವ ಅಂಬುಲೆನ್ಸ್ ನೀಡಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net