

ಚಿಕ್ಕಮಗಳೂರು: ನಾಡಹಬ್ಬ ನವರಾತ್ರಿ ಅಂಗವಾಗಿ ತಾಲೂಕಿನ ಅಂಬಳೆ ಹೋಬಳಿಯ ಆರದವಳ್ಳಿ ಗ್ರಾಮದಲ್ಲಿ ನೂರಾರು ಗ್ರಾಮಸ್ಥರು ಹಾಗೂ ಗ್ರಾಮದ ಪಟೇಲ ವಂಶಸ್ಥ ಎ.ಎನ್.ಮಹೇಶ್ ಸಾರಥ್ಯದಲ್ಲಿ ಸಂಪ್ರದಾಯಿಕ ಪೂಜಾ ವಿಧಿ ವಿಧಾನಗಳ ಮೂಲಕ ಅಂಬು ಒಡೆದು ವಿಜಯದಶಮಿಯನ್ನು ಸಂಭ್ರಮದಿAದ ಆಚರಿಸಲಾಯಿತು.
ಗ್ರಾಮಸ್ಥರು ಗ್ರಾಮದೇವರನ್ನು ಹೊತ್ತು ಊರಿನ ಸುತ್ತ ಮೆರವಣಿಗೆ ನಡೆಸಿ ಅಂಬು ಒಡೆಯುವ ಸ್ಥಳಕ್ಕೆ ಸಾಗಿದರು. ಸಾಂಪ್ರದಾಯಿಕ ಅಲಂಕೃತ ಉಡುಗೆಯೊಂದಿಗೆ ಸಿಂಗಾರಗೊAಡಿದ್ದ ಪಟೇಲ ವಂಶಸ್ಥ ಎ.ಎನ್. ಮಹೇಶ್ ಹಾಗೂ ಕುಟುಂಬಸ್ಥರನ್ನು ಊರಿನ ಮುಖಂಡರು, ಗ್ರಾಮಸ್ಥರುಗಳು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಗ್ರಾಮದ ಅಂಬು ಒಡೆಯುವ ದೊಡ್ಡಕೆರೆ ಬಳಿಗೆ ಕರೆದೊಯ್ದರು.
ಗ್ರಾಮದೇವತೆಗಳಿಗೆ ಪೂಜೆ ಸಲ್ಲಿಸಿ ಬನ್ನಿ ಮರದ ಬಳಿ ಶಮಿಪೂಜೆ ನೆರವರಿಸಿದ ನಂತರ ಊರಿನ ದೊಡ್ಡಕೆರೆ ಬಳಿಕ ಏರ್ಪಡಿಸಿದ ಅಂಬು ಹೊಡೆಯುವ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಬಾಳೆಗೊನೆಗೆ ಬಿಲ್ಲು ಹೊಡೆದು, ಬಂದೂಕಿನಿAದ ಬಾಳೆ ದಿಂಡನ್ನು ಎ.ಎನ್.ಮಹೇಶ್ ತುಂಡರಿಸಿದರು. ಈ ವೇಳೆ ಹಿರಿಯರು, ಕಿರಿಯರು, ಮಹಿಳೆಯರು, ಮಕ್ಕಳು ಕುಣಿದು ಕುಪ್ಪಳಿಸಿ ಸಂಭ್ರಮಾಚರಿಸಿದರು.
ಶ್ರೀ ಆಂಜನೇಯ ಸ್ವಾಮಿ, ಮಲ್ಲೇಶ್ವರಸ್ವಾಮಿ, ಗ್ರಾಮದೇವತೆಗಳಾದ ಮಾರಮ್ಮದೇವಿ ಹಾಗೂ ಭೂತಪ್ಪದೇವರ ಉತ್ಸವದೊಂದಿಗೆ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಂಪ್ರದಾಯಿಕವಾಗಿ ಬಾಳೆ ಗೊನೆಗೆ ಬಿಲ್ಲು ಹೊಡೆಯುವ ಮೂಲಕ ಅಂಬಿನ ಉತ್ಸವವನ್ನು ಯಶಸ್ವಿಗೊಳಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ಗ್ರಾಮಸ್ಥರಾದ ಸುರೇಂದ್ರ, ಜಗದೀಶ್, ಎ.ಪಿ.ಜಯಣ್ಣ, ಕುಮಾರ್, ಲಲಿತಾ ಶಿವಾನಂದ್, ಎಂ.ನಿAಗೇಗೌಡ, ಪಾಪೇಗೌಡ, ಷಡಾಕ್ಷರಿ, ಚಂದ್ರೇಗೌಡ, ಯೋಗೀಶ್, ಸಣ್ಣೇಗೌಡ, ವೀರಭದ್ರಾಚಾರ್ ಮತ್ತಿತರರಿದ್ದರು.