ಅಂಬಿಗರ ಚೌಡಯ್ಯ ಪುಸ್ತಕ ಬಿಡುಗಡೆ

ambigar book
Published on

ಬೀದರ್: ನಾವದಗೇರಿಯ ವಿಜಯ ಕಾಲನಿಯಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪಾರ್ವತಿ ಸೋನಾರೆ ರಚಿತ ನಿಜಶರಣ ಅಂಬಿಗರ ಚೌಡಯ್ಯ ಪುಸ್ತಕ ಬಿಡುಗಡೆ ಮಾಡಲಾಯಿತು. ಶಾಸಕ ಬಿ.ನಾರಾಯಣರಾವ ಬಿಡುಗಡೆ ಮಾಡಿ ಮಾತನಾಡಿ, ಈ ಪುಸ್ತಕ ಉತ್ತಮವಾಗಿ ಮೂಡಿಬಂದಿದೆ. ಮರು ಮುದ್ರಣಕ್ಕಾಗಿ 1 ಲಕ್ಷ ರೂ. ಕೊಡುವುದಾಗಿ ಭರವಸೆ ನೀಡಿದರು.
12ನೇ ಶತಮಾನದಲ್ಲಿ ಬಸವಣ್ಣವರು ಜಗತ್ತಿನಲ್ಲಿ ಪ್ರಪ್ರಥಮ ಪ್ರಜಾಪ್ರಭುತ್ವದ ಪಾರ್ಲಿಮೆಂಟ್ ಸ್ಥಾಪನೆ ಮಾಡಿದ ದಾರ್ಶನಿಕರು. ಮಹಿಳೆಯರಿಗೆ ಸಮಾನತೆ ನೀಡಿ ಅಂತರ್ಜಾತಿ ವಿವಾಹ ಮೂಲಕ ವಿಶ್ವಕ್ಕೆ ಶರಣರು ಮಾದರಿಯಾದ್ದಾರೆ. ವಿವಿಧ ಜಾತಿಯ 770 ಶಿವಶರಣರನ್ನು ವಿಶ್ವವೇ ಗುರುತಿಸುವಂತೆ ಮಾಡಿದ ಶ್ರೇಯ ಬಸವಣ್ಣನವರಿಗೆ ಸಲ್ಲುತ್ತದೆ. ವಿವಿಧ ಧರ್ಮಗಳಿಗೆ ಮಾನ್ಯತೆ ಸಿಕ್ಕಿದೆ. ಆದರೆ ಬಸವಣ್ಣವರು ಸ್ಥಾಪಿಸಿದ ಧರ್ಮಕ್ಕೆ ಮಾನ್ಯತೆ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಪುಸ್ತಕ ಕುರಿತು ಹಿರಿಯ ಸಾಹಿತಿ ಪ್ರೊ.ರಾಮಚಂದ್ರ ಗಣಾಪುರ ಮಾತನಾಡಿ, ಅಂಬಿಗರ ಚೌಡಯ್ಯ ಬರೆದಿರುವ ವಚನಗಳು ಬಹಳ ಕಠೋರವಾಗಿದ್ದರೂ ಮೌಢ್ಯತೆಯನ್ನು ಅನುಸರಿಸುವವರಿಗೆ ಚಾಟಿ ಏಟು ನೀಡುವಂತಿವೆ ಎಂದರು. ಹಿರಿಯ ಸಾಹಿತಿ ಭಾರತಿ ವಸ್ತ್ರದ, ಘೋಡಂಪಳ್ಳಿ ಪಿಎಚ್ಸಿ ವೈದ್ಯಾಧಿಕಾರಿ ಡಾ.ರಶೀದ್, ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಬಿ.ಜೆ. ವಿಷ್ಣುಕಾಂತ, ಕಲಾವಿದ ಮಹೇಶ ಪಾಟೀಲ್ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net